ಕರ್ನಾಟಕ

karnataka

ETV Bharat / business

'ಇಂಡಿಯನ್​ ವೆರಿಯಂಟ್​' ವೈರಸ್​ ಪದ ಅಳಿಸುವಂತೆ ಸೋಷಿಯಲ್​ ಮೀಡಿಯಾಗಳಿಗೆ ಕೇಂದ್ರ ತಾಕೀತು

ಈ ನಿಟ್ಟಿನಲ್ಲಿ ಐಟಿ ಸಚಿವಾಲಯ ಹೊರಡಿಸಿದ ನೋಟಿಸ್‌ನಲ್ಲಿ ಆನ್‌ಲೈನ್‌ ವೇದಿಕೆಯಲ್ಲಿ 'ಸುಳ್ಳು ಹೇಳಿಕೆ' ಪ್ರಸಾರವಾಗುತ್ತಿದೆ. ಇದು ಕೊರೊನಾ ವೈರಸ್‌ನ 'ಭಾರತೀಯ ರೂಪಾಂತರ' ದೇಶಾದ್ಯಂತ ಹರಡುತ್ತಿದೆ ಎಂದು ಸಾರಲಾಗುತ್ತಿದೆ ಎಂದಿದೆ..

coronavirus
coronavirus

By

Published : May 22, 2021, 3:04 PM IST

ನವದೆಹಲಿ :ಕೋವಿಡ್​ -19 ಸುತ್ತ ತಪ್ಪು ಮಾಹಿತಿಯ ಹರಡುವಿಕೆ ತಡೆಯುವ ಉದ್ದೇಶದಿಂದ ಕೊರೊನಾ ವೈರಸ್​ನ 'ಇಂಡಿಯನ್ ವೆರಿಯಂಟ್' ಎಂಬ ಪದ ಉಲ್ಲೇಖಿಸುವ ಯಾವುದೇ ಕಂಟೆಂಟ್ ತಮ್ಮ ಪ್ಲಾಟ್​​ಫಾರ್ಮ್​ನಿಂದ ತಕ್ಷಣ ತೆಗೆದು ಹಾಕುವಂತೆ ಸರ್ಕಾರ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ತಾಕೀತು ಮಾಡಿದೆ.

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಇತ್ತೀಚಿನ ಸಲಹೆ ಸ್ವೀಕರಿಸಿ, ಐಟಿ ಸಚಿವಾಲಯವು ಎಲ್ಲಾ ಸಾಮಾಜಿಕ ಮಾಧ್ಯಮಗಳಗೆ ಪತ್ರ ಬರೆದಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಇಂಡಿಯನ್ ವೇರಿಯಂಟ್ ಎಂಬ ಪದವನ್ನು ತನ್ನ ಯಾವುದೇ ವರದಿಯಲ್ಲಿ ಕೊರೊನಾ ವೈರಸ್‌ನ ಬಿ.1.617 ರೂಪಾಂತರದೊಂದಿಗೆ ಹೋಲಿಸಿಲ್ಲ ಎಂದು ಒತ್ತಿ ಹೇಳಿದೆ.

ಈ ನಿಟ್ಟಿನಲ್ಲಿ ಐಟಿ ಸಚಿವಾಲಯ ಹೊರಡಿಸಿದ ನೋಟಿಸ್‌ನಲ್ಲಿ ಆನ್‌ಲೈನ್‌ ವೇದಿಕೆಯಲ್ಲಿ 'ಸುಳ್ಳು ಹೇಳಿಕೆ' ಪ್ರಸಾರವಾಗುತ್ತಿದೆ. ಇದು ಕೊರೊನಾ ವೈರಸ್‌ನ 'ಭಾರತೀಯ ರೂಪಾಂತರ' ದೇಶಾದ್ಯಂತ ಹರಡುತ್ತಿದೆ ಎಂದು ಸಾರಲಾಗುತ್ತಿದೆ ಎಂದಿದೆ.

ಈ ವಿಷಯವನ್ನು ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2021ರ ಮೇ 12ರಂದು ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟಪಡಿಸಿದೆ ಎಂದು ಐಟಿ ಸಚಿವಾಲಯ ತಿಳಿಸಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು "ನಿಮ್ಮ ಪ್ಲಾಟ್‌ಫಾರ್ಮ್‌ನಿಂದ ಕೊರೊನಾ ವೈರಸ್‌ನ 'ಭಾರತೀಯ ರೂಪಾಂತರ' ಹೆಸರಿಸುವ, ಸೂಚಿಸುವ ಅಥವಾ ಸೂಚಿಸುವ ಎಲ್ಲ ವಿಷಯ ತಕ್ಷಣ ತೆಗೆದುಹಾಕಲು ಕೇಳಲಾಗಿದೆ. ಗೂಗಲ್, ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಭಾರತ ದೊಡ್ಡ ಮಾರುಕಟ್ಟೆಯಾಗಿದೆ.

ABOUT THE AUTHOR

...view details