ನವದೆಹಲಿ: ವಜ್ರೋದ್ಯಮಿ ನೀರವ್ ಮೋದಿಯ ಸಾವಿರಾರು ಕೋಟಿ ರೂ.ಯ ಸಾಲದ ವಂಚನೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್ಬಿ) ಎಸ್.ಎಸ್. ಮಲ್ಲಿಕಾರ್ಜುನ ರಾವ್ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಿಸಲಾಗಿದೆ.
ಸಂಕಷ್ಟಕ್ಕೆ ಸಿಲುಕಿದ ಪಿಎನ್ಬಿ ಬ್ಯಾಂಕ್ಗೆ ನೂತನ ಸಾರಥಿ ನೇಮಕ
ಸಿಲುಕಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್ಬಿ) ಎಸ್.ಎಸ್. ಮಲ್ಲಿಕಾರ್ಜುನ ರಾವ್ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಿಸಲಾಗಿದೆ. 57 ವರ್ಷದ ರಾವ್ ಅವರು ಪ್ರಸ್ತುತ ಅಲಹಾಬಾದ್ ಬ್ಯಾಂಕ್ನ ಎಂಡಿ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದು, 2021ರ ಸೆಪ್ಟಂಬರ್ 18ರ ವರೆಗೆ ಪಿಎನ್ಬಿಯ ಉನ್ನತ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಪಿಎನ್ಬಿಯ ಆಡಳಿತ ಮಂಡಳಿ ತಿಳಿಸಿದೆ.
57 ವರ್ಷದ ರಾವ್ ಅವರು ಪ್ರಸ್ತುತ ಅಲಹಾಬಾದ್ ಬ್ಯಾಂಕ್ನ ಎಂಡಿ ಮತ್ತು ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2021ರ ಸೆಪ್ಟಂಬರ್ 18ರ ವರೆಗೆ ಅಧಿಕಾರ ಅವಧಿ ಇರಲಿದೆ ಎಂದು ಪಿಎನ್ಬಿಯ ಆಡಳಿತ ಮಂಡಳಿ ತಿಳಿಸಿದೆ.
ಕ್ಯಾಬಿನೆಟ್ ನೇಮಕಾತಿ ಸಮಿತಿಯು (ಎಸಿಸಿ) ಎಸ್.ಎಸ್. ಮಲ್ಲಿಕಾರ್ಜುನ ರಾವ್ ಅವರ ಆಯ್ಕೆಯ ಹಣಕಾಸು ಸೇವಾ ಮಂಡಳಿಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ಆಗಸ್ಟ್ ತಿಂಗಳಲ್ಲಿ ಮೂರನೇ ಹಂತದ ಬ್ಯಾಂಕ್ಗಳ ವಿಲೀನ ಘೋಷಣೆ ಮಾಡಿತ್ತು. ಪಿಎನ್ಬಿ ಜೊತೆಗೆ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಅನ್ನು ವಿಲೀನಗೊಳಿಸುವುದಾಗಿ ತಿಳಿಸಿತ್ತು.