ನವದೆಹಲಿ: ಎಜಿಆರ್ ವಿಚಾರಣೆ ಕುರಿತು ಸುಪ್ರೀಂಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳಿಗೆ ಶುಕ್ರವಾರ ಮಧ್ಯರಾತ್ರಿಯೊಳಗೆ ಬಾಕಿ ಹಣ ಕೊಡುವಂತೆ ದೂರಸಂಪರ್ಕ ಇಲಾಖೆ ಆದೇಶಿಸಿದೆ.
ಮಧ್ಯರಾತ್ರಿ 11.59ರೊಳಗೆ ಬಾಕಿ ಹಣ ಕೊಡುವಂತೆ DOT ಕಟ್ಟಪ್ಪಣೆ: ಏರ್ಟೆಲ್,ವೊಡಾ-ಐಡಿಯಾಗೆ ನಡುಕ - Supreme Court
ಟೆಲಿಕಾಂ ಕಂಪನಿಗಳಿಂದ ಬಾಕಿ ಹಣವನ್ನು ವಸೂಲಿ ಮಾಡದ್ದಕ್ಕಾಗಿ ಸುಪ್ರೀಂಕೋರ್ಟ್ ಕೆಂಗಣ್ಣು ಎದುರಿಸುತ್ತಿರುವ ಡಿಒಟಿ, ದೂರಸಂಪರ್ಕ ಸೇವಾ ಸಂಸ್ಥೆಗಳಿಗೆ ವಲಯ ಅಥವಾ ವಲಯವಾರು ಬೇಡಿಕೆ ನೋಟಿಸ್‌ಗಳನ್ನು ನೀಡಲು ಪ್ರಾರಂಭಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಟೆಲಿಕಾಂ
ಆದೇಶದಲ್ಲಿ ಟೆಲಿಕಾಂ ಇಲಾಖೆ, ಶುಕ್ರವಾರ ಮಧ್ಯರಾತ್ರಿ 11.59ರ ಒಳಗೆ ಬಾಕಿ ಹಣ ಪಾವತಿಸಿ ಎಂದು ಟೆಲಿಕಾಂ ಸೇವಾ ಸಂಸ್ಥೆಗಳಿಗೆ ಸೂಚಿಸಿದೆ. ಸುಪ್ರೀಂಕೋರ್ಟ್ ಕೋಪಕ್ಕೆ ಗುರಿಯಾಗಿರುವ ಕಂಪನಿಗಳು ತಕ್ಷಣ ಬಾಕಿ ಹಣ ಪಾವತಿಸಬೇಕಾದ ಒತ್ತಡದಲ್ಲಿ ಸಿಲುಕಿವೆ.