ಕರ್ನಾಟಕ

karnataka

ETV Bharat / business

ಕಾರು ಮಾಲೀಕರಿಗೆ ಸಿಹಿ ಸುದ್ದಿ: ಸೆಕೆಂಡ್​ ಹ್ಯಾಂಡ್​​ ಕಾರುಗಳ ಮೇಲೆ ಸಾಲ ವಿತರಣೆ!

ಕೊರೊನಾ ಪೂರ್ವದ ಸಮಯಕ್ಕೆ ಹೋಲಿಸಿದರೆ ದ್ರವ್ಯತೆ ಬಿಕ್ಕಟ್ಟಿನಿಂದಾಗಿ ಕಾರು ಮಾರಾಟ ಮಾಡುವ ಗ್ರಾಹಕರ ಸಂಖ್ಯೆ ದ್ವಿಗುಣಗೊಂಡಿದೆ ಎಂಬ ಮಾಹಿತಿಯನ್ನ ಕಾರ್ಸ್​24 ಉಲ್ಲೇಖಿಸಿದೆ. ತಮ್ಮ ಕಾರುಗಳನ್ನು ಮಾರಾಟ ಮಾಡಲು ಇಚ್ಛಿಸದ ಗ್ರಾಹಕರಿಗೆ, ಅವರ ಕಾರುಗಳ ಮೇಲೆ ಸಾಲ ನೀಡಲಾಗುವುದು ಎಂದಿದೆ.

Car
ಕಾರು

By

Published : Jul 21, 2020, 3:37 PM IST

ನವದೆಹಲಿ: ಪೂರ್ವ ಸ್ವಾಮ್ಯದ ವಾಹನಗಳ ಖರೀದಿ ಮತ್ತು ಮಾರಾಟ ಮಾಡುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಕಾರ್ಸ್ -​​24 (CARS24), ಗ್ರಾಹಕರಿಗೆ ತಮ್ಮ ಕಾರುಗಳ ಮೇಲೆ ಸಾಲ ನೀಡುವ ಯೋಜನೆಯೊಂದನ್ನು ಪ್ರಾರಂಭಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ಪೂರ್ವದ ಸಮಯಕ್ಕೆ ಹೋಲಿಸಿದರೆ ದ್ರವ್ಯತೆ ಬಿಕ್ಕಟ್ಟಿನಿಂದಾಗಿ ಕಾರು ಮಾರಾಟ ಮಾಡುವ ಗ್ರಾಹಕರ ಸಂಖ್ಯೆ ದ್ವಿಗುಣಗೊಂಡಿದೆ ಎಂಬ ಆಂತರಿಕ ಸಂಶೋಧನೆಯನ್ನು ಕಾರ್ಸ್ ​24 ಉಲ್ಲೇಖಿಸಿದೆ. ತಮ್ಮ ಕಾರುಗಳನ್ನು ಮಾರಾಟ ಮಾಡಲು ಇಚ್ಛಿಸದ ಗ್ರಾಹಕರಿಗೆ, ಅವರ ಕಾರುಗಳ ಮೇಲೆ ಸಾಲ ನೀಡಲಾಗುವುದು ಎಂದಿದೆ.

ಈ ಸೇವೆಯು ಗ್ರಾಹಕರಿಗೆ ತಮ್ಮ ಸ್ವತ್ತು ಮಾಲೀಕತ್ವವನ್ನು ಉಳಿಸಿಕೊಳ್ಳಲು ನೆರವಾಗಲಿದೆ. ಅದೇ ಸಮಯದಲ್ಲಿ ಅವರ ವೈಯಕ್ತಿಕ ಅಗತ್ಯಗಳಿಗಾಗಿ ಹಣವನ್ನು ಸಹ ನೀಡಲಾಗುವುದು. ಪ್ರಸ್ತುತ, ಈ ಸೇವೆಯು ದೆಹಲಿ - ಎನ್‌ಸಿಆರ್‌ನಲ್ಲಿ ಲಭ್ಯವಿದೆ. ಮುಂದಿನ ತಿಂಗಳಿಂದ ಬೆಂಗಳೂರು ಹಾಗೂ ಹೈದರಾಬಾದ್​ನ ನಿವಾಸಿಗರು ಈ ಸೌಲಭ್ಯ ಪಡೆಯ ಬಹುದಾಗಿದೆ.

ಜನರು ತಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ತಮ್ಮ ಕಾರುಗಳನ್ನು ಮಾರಾಟ ಮಾಡಲು ಆಸಕ್ತಿ ತೋರಿಸಿದ ಹಲವು ಪ್ರಕರಣಗಳನ್ನು ನಾವು ಕಂಡಿದ್ದೇವೆ. ಈ ದಿನಗಳಲ್ಲಿ ಕಾರು ಹೊಂದುವುದು ಅವಶ್ಯಕತೆಯಿದೆ ಎಂಬುದನ್ನು ತಿಳಿದುಕೊಂಡು, ನಾವು ಒಂದು ಯೋಜನೆಯೊಂದನ್ನು ಜಾರಿಗೆ ತಂದಿದ್ದೇವೆ. ಇದರಿಂದ ಅವರ ಸ್ವತ್ತುಗಳನ್ನು ಉಳಿಸಿಕೊಳ್ಳಬಹುದು. ಮುಂದಿನ ಆರು ತಿಂಗಳಲ್ಲಿ ನಮ್ಮ ಸೇವೆಗಳನ್ನು ಎಲ್ಲ ಮಹಾನಗರಗಳಲ್ಲಿ ವಿಸ್ತರಿಸಲು ಕಂಪನಿ ಉದ್ದೇಶಿಸಿದೆ ಎಂದು ಕಾರ್ಸ್​24 ಉಪಾಧ್ಯಕ್ಷ ವಂದಿತಾ ಕೌಲ್ ಹೇಳಿದರು.

ಇಲ್ಲಿಯವರೆಗೆ ನಮ್ಮ ಗ್ರಾಹಕರಿಗೆ 35 ಲಕ್ಷ ರೂ. ಸಾಲ ವಿತರಿಸಿದ್ದೇವೆ. ಇದನ್ನು ಇನ್ನಷ್ಟು ಬಲಪಡಿಸುವ ಭರವಸೆ ಹೊಂದಿದ್ದೇವೆ. ಪ್ರಮಾಣಿತ ಕಾರ್ಯವಿಧಾನ, ಕಾರುಗಳ ಹಣಕಾಸು ಮತ್ತು ಮೌಲ್ಯದ ನಂತರ ಸಾಲ ವಿತರಣೆಯ ಮೌಲ್ಯ ಅಂದಾಜು ಮಾಡಲಾಗುತ್ತದೆ ಎಂದರು.

ABOUT THE AUTHOR

...view details