ಹೈದರಾಬಾದ್: ದೇಶೀಯವಾಗಿ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಭಾರತ್ ಬಯೋಟೆಕ್‌ನ ಉನ್ನತ ಅಧಿಕಾರಿಗಳನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದರು.
ಸ್ಥಳೀಯವಾಗಿ ಲಸಿಕೆ ಅಭಿವೃದ್ಧಿಯ ಪ್ರಸ್ತುತ ಸ್ಥಿತಿ, ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಲಭ್ಯವಾಗುವಂತೆ ಮಾಡುವ ಯೋಜನೆಗಳ ಬಗ್ಗೆ ಭಾರತ್ ಬಯೋಟೆಕ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಅಭಿವೃದ್ಧಿಪಡಿಸುತ್ತಿರುವ ಕೋವಾಕ್ಸಿನ್ ಕುರಿತು ಚರ್ಚಿಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಂಚಾರದ ಜೀವಸೆಲೆ ಭಾರತೀಯ ರೈಲ್ವೆ: 167 ವರ್ಷಗಳ ಇತಿಹಾಸದಲ್ಲಿ ಹೀಗಾಗಿದ್ದು ಇದೇ ಮೊದಲು!
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್ ಬಯೋಟೆಕ್‌ನ ಲಸಿಕೆ ಸಂಶೋಧನಾ ಘಟಕಕ್ಕೆ ಭೇಟಿ ನೀಡಿ ಕೋವಾಕ್ಸಿನ್ ಸ್ಥಿತಿಯನ್ನು ಪರಿಶೀಲಿಸಿದ್ದರು. ಇದರ ನಂತರ ಹಲವು ರಾಷ್ಟ್ರಗಳ 70 ರಾಯಭಾರಿಗಳು ಮತ್ತು ಹೈ ಕಮಿಷನರ್‌ಗಳು ಹೈದರಾಬಾದ್‌ನ ಜೀನೋಮ್ ವ್ಯಾಲಿಯಲ್ಲಿರುವ ಕಂಪನಿ ಘಟಕಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಿದೆ.
ದೇಶೀಯವಾಗಿ ವಿಶ್ವ ದರ್ಜೆಯ ಲಸಿಕೆಯೊಂದಿಗೆ ಹೊರಬರುತ್ತಿರುವ ಸಾರ್ವಜನಿಕ - ಖಾಸಗಿ ಸಹಭಾಗಿತ್ವದ ಲಸಿಕೆಯ ಮಹತ್ವವನ್ನು ಉಪರಾಷ್ಟ್ರಪತಿ ಶ್ಲಾಘಿಸಿದರು.