ಕರ್ನಾಟಕ

karnataka

ETV Bharat / business

ಮುಂದೈತೆ ಸಾಲು-ಸಾಲು ರಜೆ! ಬ್ಯಾಂಕ್‌ ವ್ಯವಹಾರಕ್ಕೆ ಪ್ಲಾನ್ ಮಾಡಿಕೊಳ್ಳಿ

2019ರ ಪ್ರಸ್ತಕ ಸಾಲಿನ ಮೇ ತಿಂಗಳಲ್ಲಿ 8 ದಿನ ಬ್ಯಾಂಕ್​ಗಳಿಗೆ ರಜೆ ಇರಲಿದ್ದು, ಗ್ರಾಹಕರು, ವ್ಯಾಪಾರಿಗಳು ಬ್ಯಾಂಕ್​ ವ್ಯವಹಾರಗಳ ನಿರ್ವಹಣೆಗಾಗಿ ಇಂದಿನಿಂದಲೇ ಯೋಜನೆ ರೂಪಿಸಿಕೊಳ್ಳುವುದು ಉತ್ತಮ.

ಸಾಂದರ್ಭಿಕ ಚಿತ್ರ: ಚಿತ್ರ ಕೃಪೆ ಗೆಟ್ಟೆ

By

Published : Apr 30, 2019, 9:34 PM IST

ಮುಂಬೈ: ಮುಂದಿನ ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ ಹೆಚ್ಚಿನ ರಜಾ ದಿನಗಳಿದ್ದು, ಗ್ರಾಹಕರು ಅಗತ್ಯವಿರುವಷ್ಟು ಹಣ ಹಾಗೂ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿಕೊಳ್ಳಲು ಮೊದಲೇ ಯೋಜನೆ ರೂಪಿಸಿಕೊಳ್ಳುವುದು ಸೂಕ್ತ.

ಮೇ ಮೊದಲ ದಿನವೇ ವಿಶ್ವ ಕಾರ್ಮಿಕರ ದಿನಾಚರಣೆಯೊಂದಿಗೆ ರಜೆ ಆರಂಭವಾಗುತ್ತಿದೆ. ಮೇ 7ರಂದು ಬಸವ ಜಯಂತಿ ಪ್ರಯುಕ್ತ ರಜೆ ಘೋಷಿಸಲಾಗಿದೆ.

ಮೇ18 ರಂದು ಭಗವಾನ್ ಬುದ್ಧ ಪೂರ್ಣಿಮಾ ಇರುವ ಕಾರಣ ಕೆಲವು ಬ್ಯಾಂಕ್​ಗಳ ಬಾಗಿಲು ತೆರೆಯುವ ಸಾಧ್ಯತೆ ತೀರಾ ಕಡಿಮೆ. ಉಳಿದಂತೆ ಮೇ 11 ಮತ್ತು 25 ಎರಡನೇ ಹಾಗೂ ನಾಲ್ಕನೇ ಶನಿವಾರದ ರಜೆ ಮುಂದುವರೆಯುತ್ತದೆ.

ಮೇ 5, 12, 19 ಮತ್ತು 26ರಂದು ಭಾನುವಾರ ಯಥಾಸ್ಥಿತಿ ರಜೆ ಇರಲಿದೆ. ಒಟ್ಟಾರೆ ಪ್ರಸ್ತಕ ಸಾಲಿನ ಮೇ ತಿಂಗಳಲ್ಲಿ 8 ದಿನ ಬ್ಯಾಂಕ್​ಗಳಿಗೆ ರಜೆ ಇರಲಿದ್ದು, ಗ್ರಾಹಕರು, ವ್ಯಾಪಾರಿಗಳು ಬ್ಯಾಂಕ್​ ವ್ಯವಹಾರಗಳ ನಿರ್ವಹಣೆಗಾಗಿ ಇಂದಿನಿಂದಲೇ ಯೋಜನೆ ರೂಪಿಸಿಕೊಳ್ಳುವುದು ಉತ್ತಮ.

For All Latest Updates

TAGGED:

ABOUT THE AUTHOR

...view details