ಕರ್ನಾಟಕ

karnataka

ETV Bharat / business

ಲೋನ್ ಚಿಂತೆಯಿಂದ ಮುಕ್ತ: ಕಡಿಮೆ ಬೆಲೆಗೆ ಮಾರುತಿ ಕಾರ್ ಲೀಸ್... ಯಾವೆಲ್ಲ ಕಾರು ಲಭ್ಯ? - ಲೀಸ್ ಚಂದಾದಾರಿಕೆ

ನೂತನ ಲೀಸ್ ಯೋಜನೆ ಅಡಿ ಮಾರುತಿ ಸುಜುಕಿ, ನಾನಾ ಕಾರುಗಳನ್ನು ನಿಗದಿತ ಅವಧಿಗೆ ಇಂತಿಷ್ಟು ಪ್ರಮಾಣದಲ್ಲಿ ದರ ವಿಧಿಸುತ್ತಿದೆ. ಕಾರು ಮಾದರಿ ಹಾಗೂ ಲೀಸ್ ಅವಧಿಯನ್ನು ಆಧರಿಸಿ ಬೆಲೆ ನಿಗದಿಪಡಿಸಲಾಗುತ್ತಿದೆ. ಕೊರೊನಾ ಪ್ರೇರೇಪಿತ ಆರ್ಥಿಕ ನಷ್ಟದಿಂದ ಹೊರಬರಲು ಆಟೋಮೊಬೈಲ್​ನ ಹಲವು ಸಂಸ್ಥೆಗಳು ಲೀಸ್ ಸೇವೆಯ ಮೊರೆ ಹೋಗಿವೆ.

Maruti
ಮಾರುತಿ

By

Published : Jul 27, 2020, 5:50 PM IST

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ 'ಮಾರುತಿ ಸುಜುಕಿ ಸಬ್‌ಸ್ಕ್ರೈಬ್' ಬ್ರ್ಯಾಂಡ್​ ಅಡಿಯಲ್ಲಿ ಗ್ರಾಹಕರಿಗೆ ವಾಹನ ಗುತ್ತಿಗೆ ಸೇವೆಯನ್ನು ಪ್ರಾರಂಭಿಸಿದೆ.

ಭಾರತದಲ್ಲಿ ಚಂದಾದಾರಿಕೆ ಸೇವೆಯನ್ನು ಪ್ರಾರಂಭಿಸಲು ಜಪಾನ್‌ನ ಒರಿಕ್ಸ್ ಕಾರ್ಪೊರೇಷನ್‌ನ ಅಂಗಸಂಸ್ಥೆಯಾದ ಒರಿಕ್ಸ್ ಆಟೋ ಇನ್ಫ್ರಾಸ್ಟ್ರಕ್ಚರ್ ಸರ್ವೀಸಸ್ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿ ತಿಳಿಸಿದೆ.

ನೂತನ ಲೀಸ್ ಯೋಜನೆ ಅಡಿ ಕಂಪನಿಯು ನಾನಾ ಕಾರುಗಳನ್ನು ನಿಗದಿತ ಅವಧಿಗೆ ಇಂತಿಷ್ಟು ಪ್ರಮಾಣದಲ್ಲಿ ದರ ವಿಧಿಸುತ್ತಿದೆ. ಕಾರು ಮಾದರಿ ಹಾಗೂ ಲೀಸ್ ಅವಧಿಯನ್ನು ಆಧರಿಸಿ ಬೆಲೆ ನಿಗದಿಪಡಿಸಲಾಗುತ್ತಿದೆ. ಕೊರೊನಾ ಪ್ರೇರೇಪಿತ ಆರ್ಥಿಕ ನಷ್ಟದಿಂದ ಹೊರಬರಲು ಆಟೋಮೊಬೈಲ್​ನ ಹಲವು ಸಂಸ್ಥೆಗಳು ಲೀಸ್ ಸೇವೆಯ ಮೊರೆ ಹೋಗಿವೆ.

ಚಂದಾದಾರಿಕೆ ಸೇವೆ ಗುರುಗ್ರಾಮ್ ಮತ್ತು ಬೆಂಗಳೂರಿನಲ್ಲಿ ಪ್ರಾಯೋಗಿಕ ಯೋಜನೆಯಾಗಿ ಆರಂಭಿಕ ದಿನಗಳಲ್ಲಿ ಪ್ರಾರಂಭಿಸಲಾಗಿತ್ತು. ಅರೆನಾ, ಸ್ವಿಫ್ಟ್, ಡಿಜೈರ್, ವಿಟಾರಾ ಬ್ರೆಝಾ ಮತ್ತು ಎರ್ಟಿಗಾ ಕಾರುಗಳು ಮೇಲೆ ಲೀಸ್​ ಆಯ್ಕೆಯಲ್ಲಿ ಲಭ್ಯ ಇವೆ. ನೆಕ್ಸಾ ಕಾರು ಮಾರಾಟ ಮಳಿಗೆಗಳಲ್ಲಿ ಬಾಲೆನೊ, ಸಿಯಾಜ್ ಮತ್ತು ಎಕ್ಸ್‌ಎಲ್ 6 ಕಾರುಗಳನ್ನು ಲೀಸ್ ಪಡೆಯಬಹುದು.

ಮಾರುತಿ ಸುಜುಕಿ ಇಂಡಿಯಾ ಪ್ರತಿಸ್ಪರ್ಧಿ ಹ್ಯುಂಡೈ ಮೋಟಾರ್ ಇಂಡಿಯಾ, ಕಳೆದ ವರ್ಷ ತನ್ನ ಚಂದಾದಾರಿಕೆ ಮಾದರಿಯನ್ನು ಆರು ನಗರಗಳಲ್ಲಿ ಬಿಡುಗಡೆ ಮಾಡಿತ್ತು. ಸ್ವಯಂ ಡ್ರೈವ್ ಕಾರು ಹಂಚಿಕೆ ಸಂಸ್ಥೆ ರೆವ್ವ್ ಸಹಭಾಗಿತ್ವ ಪಡೆದಿದೆ.

ಮಾರುತಿ ಸುಜುಕಿಯು ಪ್ರತಿ ದಿನಕ್ಕೆ ಕನಿಷ್ಠ 700 ರೂ.ಯಿಂದ ಗರಿಷ್ಠ 1,200 ದರ ಅನ್ವಯವಾಗುವಂತೆ ಲೀಸ್ ಕಾರು ದರ ನಿಗಡಿಪಡಿಸಲಾಗಿದೆ. ಹೊಸ ಕಾರು ನೋಂದಣಿಯಾದ 15 ದಿನದ ಒಳಗೆ ಕಾರಿನ ಮಾಲೀಕತ್ವ ಹಸ್ತಾಂತರ ಮಾಡಲಾಗುತ್ತದೆ. ಕಾರುಗಳ ದರವನ್ನು ಮಾಸಿಕ ಪಾವತಿಸಬೇಕಿದ್ದು, ಕನಿಷ್ಠ 24 ತಿಂಗಳ ಲೀಸ್ ಆಯ್ಕೆ ಪಡೆದುಕೊಳ್ಳಬೇಕು. ಲೀಸ್ ಮೊತ್ತದಲ್ಲೇ ಕಾರಿನ ನಿರ್ವಹಣೆ ವೆಚ್ಚ, ಪಾಲಿಸಿ ದರಗಳು ಒಳಗೊಂಡಿರುತ್ತವೆ.

ABOUT THE AUTHOR

...view details