ಬೆಂಗಳೂರು:ಕರ್ನಾಟಕ ರಾಜ್ಯ ಐಟಿ / ಐಟಿಎಸ್ ನೌಕರರ ಒಕ್ಕೂಟ (ಕೆಐಟಿಯು) ಭಾರತದಲ್ಲಿ ಐಟಿ ಸಂಸ್ಥೆ ಅಕ್ಸೆಂಚರ್‌ನ ವಜಾ ಯೋಜನೆಗಳನ್ನು ತೀವ್ರವಾಗಿ ಖಂಡಿಸಿದ್ದು, ಬಹು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದು ಈ ನೆಲದ ಕಾನೂನಿಗೆ ವಿರುದ್ಧವಾದ ಕಾನೂನುಬಾಹಿರ ನಡೆ ಎಂದಿದೆ.
ಈ ವಾರದ ಆರಂಭದಲ್ಲಿ ಮಾಧ್ಯಮ ವರದಿಗಳು ಅಕ್ಸೆಂಚರ್ ಪ್ರಪಂಚದಾದ್ಯಂತ 25,000 ಉದ್ಯೋಗಿಗಳನ್ನು ಅಥವಾ ತನ್ನ ಒಟ್ಟು ಉದ್ಯೋಗಿಗಳ ಪೈಕಿ 5ರಷ್ಟು ನೌಕರರನ್ನು ವಜಾ ಮಾಡುವ ಸಾಧ್ಯತೆಯಿದೆ ಎಂದು ಹೇಳಿದೆ.
ಭಾರತವು 2,00,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿ, ಅತಿದೊಡ್ಡ ಉದ್ಯೋಗಿಗಳನ್ನು ಹೊಂದಿರುವ ಐಟಿ ಸಂಸ್ಥೆ ಎಂಬ ಹೆಗ್ಗಳಿಕೆ ಇದೆ. ಪ್ರಸ್ತುತ ಸುತ್ತಿನ ಮೌಲ್ಯಮಾಪನದ ಬಳಿಕ ಕನಿಷ್ಠ 10,000 ಜನ ತಮ್ಮ ಉದ್ಯೋಗ ಕಳೆದುಕೊಳ್ಳುವ ಅಪಾಯ ಎದುರಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಪ್ರಸ್ತುತ ಕಾರ್ಮಿಕ ಕಾನೂನುಗಳ ಪ್ರಕಾರ, ಕಂಪನಿಗಳು 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವ ಮೊದಲ ಸರ್ಕಾರದಿಂದ ಅನುಮೋದನೆ ಪಡೆಯಬೇಕು.
ಕೈಗಾರಿಕಾ ವಿವಾದ ಕಾಯ್ದೆಯಲ್ಲಿ ಇತ್ತೀಚಿನ ತಿದ್ದುಪಡಿಯ ನಂತರ ಕರ್ನಾಟಕದಲ್ಲಿ ಈ ಮಿತಿಯನ್ನು 300 ಉದ್ಯೋಗಿಗಳಿಗೆ ಹೆಚ್ಚಿಸಲಾಗಿದೆ. ಅಕ್ಸೆಂಚರ್‌ಗೆ ತನ್ನ ಸಿಬ್ಬಂದಿ ವಜಾ ಮಾಡುವ ಮೊದಲು ರಾಜ್ಯ ಸರ್ಕಾರದ ಅನುಮತಿ ಅಗತ್ಯವಿರುತ್ತದೆ ಎಂಬುದು ಇದು ಸೂಚಿಸುತ್ತದೆ.
ಕಂಪನಿಯು ತನ್ನ ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಅಥವಾ ಸ್ವಯಂಪ್ರೇರಣೆಯಿಂದ ನಿವೃತ್ತಿ ಹೊಂದುವಂತೆ ಒತ್ತಡ ಹೇರಬಹುದು. ಈ ಮೂಲಕ ಕಂಪನಿ ಈ ಕಾರ್ಮಿಕ ಕಾಯ್ದೆಯನ್ನು ಬೈಪಾಸ್ ಮಾಡಬಹುದು ಎಂದು ಕೆಐಟಿಯು ಎಚ್ಚರಿಸಿದೆ. ಇಂತಹ ನಡೆ ಕಾನೂನಿಗೆ ವಿರುದ್ಧವಾಗಿದೆ ಎಂದಿದೆ.
ಕಂಪನಿಯು ನೌಕರರಿಂದ ರಾಜೀನಾಮೆ ಕೇಳಿದರು ಅದನ್ನು ನಿರಾಕರಿಸಬೇಕೆಂದು ಕೆಐಟಿಯು ನೌಕರರನ್ನು ಒತ್ತಾಯಿಸುತ್ತದೆ. ಕಂಪನಿಯು ನೆಲದ ಕಾನೂನನ್ನು ಗೌರವಿಸಬೇಕು. ಈ ವಿಷಯದಲ್ಲಿ ಸರ್ಕಾರ ತುರ್ತಾಗಿ ಮಧ್ಯ ಪ್ರವೇಶಿಸಬೇಕು ಎಂದು ಕರ್ನಾಟಕ ರಾಜ್ಯ ಐಟಿ / ಐಟಿಎಸ್ ನೌಕರರ ಒಕ್ಕೂಟದ (ಕೆಐಟಿಯು) ಪ್ರಧಾನ ಕಾರ್ಯದರ್ಶಿ ಸಿ.ಉಲ್ಲಾಸ್ ಆಗ್ರಹಿಸಿದರು.