ಬರ್ಮಿಂಗ್ಹ್ಯಾಮ್:ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಪರ್ಧಾತ್ಮಕ ಬೆಲೆಯಲ್ಲಿ ವಾಣಿಜ್ಯ-ವಹಿವಾಟು ನಡೆಸುವ ಆದ್ಯತೆಯ ವ್ಯಾಪಾರ ಮಾನ್ಯತೆ (ಜಿಎಸ್ಪಿ)ದಿಂದ ಪಾಕಿಸ್ತಾನವನ್ನು ಕೈಬಿಡುವಂತೆ ಯುರೋಪ್ ಇಂಡಿಯಾ ಚೇಂಬರ್ ಆಫ್ ಕಾಮರ್ಸ್ ಯುರೋಪಿಯನ್ ಕಮಿಷನರ್ಗೆ (ಇಯು) ಮನವಿ ಮಾಡಿದೆ.
ಪಾಕ್ಗೆ 'ಆದ್ಯತಾ ವ್ಯಾಪಾರ' ಮಾನ್ಯತೆ ರದ್ದುಪಡಿಸಿ: ಐರೋಪ್ಯ ಒಕ್ಕೂಟಕ್ಕೆ ಮನವಿ - Article 370
ಇಂಡೋ- ಯುರೋಪಿಯನ್ ಕಾಶ್ಮೀರ ಫೋರಂ/ ಹಿಂದೂ ಕೌನ್ಸಿಲ್ ಸದಸ್ಯರು ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿನ ವಿಕ್ಟೋರಿಯಾ ಚೌಕದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕಾಶ್ಮೀರಕ್ಕೆ ಭಾರತ ನೀಡಿದ್ದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡಿದ್ದನ್ನು ಪ್ರತಿಭಟನಾ ನಿರತರು ಬೆಂಬಲಿಸಿದರು.
ಸಾಂದರ್ಭಿಕ ಚಿತ್ರ
ಇಂಡೋ- ಯುರೋಪಿಯನ್ ಕಾಶ್ಮೀರ್ ಫೋರಂ/ ಹಿಂದೂ ಕೌನ್ಸಿಲ್ ಸದಸ್ಯರು ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿನ ವಿಕ್ಟೋರಿಯಾ ಸ್ಕ್ವಾಯರ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕಾಶ್ಮೀರಕ್ಕೆ ಭಾರತ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಮತ್ತು 35ಎ ಹಿಂತೆಗೆದುಕೊಂಡಿದ್ದನ್ನು ಪ್ರತಿಭಟನಾ ನಿರತರು ಬೆಂಬಲಿಸಿದರು.
ಪಾಕಿಸ್ತಾನಕ್ಕೆ ನೀಡಿದ ಜಿಎಸ್ಪಿಯನ್ನು ತಕ್ಷಣದಿಂದಲೇ ವಾಪಸ್ ಪಡೆಯಬೇಕು. ಪಾಕ್ ತನ್ನ ನೆಲದಲ್ಲಿ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್, ಸಿಖ್ ಮತ್ತು ಹಿಂದೂಗಳ ಹಕ್ಕುಗಳನ್ನು ದಮನಗೊಳಿಸುತ್ತಿದೆ ಎಂದು ದೂರಿ ಮನವಿ ಮಾಡಿದೆ.