ಹೈದರಾಬಾದ್:ಹಣಕಾಸು ವ್ಯವಹಾರವನ್ನು ನಿರ್ವಹಿಸುವುದು ಒಂದು ಕಲೆ. ಇದು ಬಲ್ಲವರು ಉತ್ತಮವಾದ ಜೀವನ ನಡೆಸಲು ಸಹಕಾರಿ ಎಂಬ ಮಾತುಗಳು ನಿಜವೂ ಹೌದು. ಇದಕ್ಕಾಗಿ ಬ್ಯಾಂಕ್ ಖಾತೆಗಳ ಹೊಂದಿರುವ ಬಗ್ಗೆಯೂ ತಿಳಿದುಕೊಳ್ಳುವುದು ಒಳ್ಳೆಯದು.
ಹೌದು, ಬ್ಯಾಂಕ್ ಖಾತೆಗಳ ತೆಗೆಯುವ ಬಗ್ಗೆ ಸಹಜವಾಗಿ ಕೆಲವೊಮ್ಮೆ ಗೊಂದಲ ಮೂಡುತ್ತಿದೆ. ಒಂದೇ ಬ್ಯಾಂಕ್ ಖ್ಯಾತೆ ಇದ್ದರೆ ಸಾಕಲ್ಲ ಎಂದೂ ಅನಿಸುತ್ತದೆ. ಆದರೆ, ನಿರಂತರವಾಗಿ ಹಣ ಗಳಿಕೆ ಮಾಡುವವರು ಮತ್ತು ಮಾಸಿಕ ಸಂಬಳ ಪಡೆಯುವವರು ಎರಡು ರೀತಿಯ ಖಾತೆಗಳನ್ನು ಹೊಂದುವುದು ಒಳ್ಳೆಯದು.
ಯಾಕೆಂದರೆ, ಒಂದೇ ಖಾತೆಗೆ ಗಳಿಕೆಯ ಹಣ ಬರುವುದು ಮತ್ತು ಅದೇ ಖಾತೆಯಿಂದ ಇಎಂಐ ಸೇರಿ ಇತರ ಖರ್ಚು-ವೆಚ್ಚಗಳಿಗೆ ಹಣ ಕಡಿತ ಮಾಡಬೇಕಾಗುತ್ತದೆ. ಆಗ ನಿಮಗೆ ಗಳಿಕೆ ಹಣ ಎಷ್ಟು ಬಂದಿತ್ತು?. ಅದರಲ್ಲಿ ಎಷ್ಟು ಕಡಿತವಾಯಿತು ಎಂಬ ಲೆಕ್ಕ ಹಾಕಬೇಕಾಗುತ್ತದೆ. ಅಲ್ಲದೇ, ಕೆಲ ಸಲ ನಾನು ಇಷ್ಟೊಂದು ಹಣ ಖರ್ಚು ಮಾಡಿಲ್ಲ ಎಂಬ ಗೊಂದಲ ಸಹ ಸೃಷ್ಟಿಯಾಗುತ್ತದೆ.
ಹೀಗಾಗಿ ನಿಮ್ಮ ಗಳಿಕೆ ಹಣದಲ್ಲಿ ನಿರ್ದಿಷ್ಟ ಮೊತ್ತವನ್ನು ಮತ್ತೊಂದು ಉಳಿತಾಯ ಖಾತೆಗೆ ವರ್ಗಾಯಿಸುವುದು ಉತ್ತಮ. ಇದರಿಂದ ಇಎಂಐ, ವಿಮೆ ಕಂತುಗಳು ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸುವ ಹಣವನ್ನು ಹೊಂದಿಸುವುದು ತುಂಬಾ ಸುಲಭವಾಗಲಿದೆ. ಅಲ್ಲದೇ, ನಿಮಗೆ ತಿಂಗಳಿಗೆ ಎಷ್ಟು ಖರ್ಚು ಆಗುತ್ತದೆ ಎಂಬುವುದು ತಿಳಿದುಕೊಳ್ಳಿ. ಇದರಿಂದ ಭವಿಷ್ಯಕ್ಕೆ ಹಣ ಉಳಿತಾಯ ಮಾಡಲು ಸಾಧ್ಯವಾಗಲಿದೆ.