ಮುಂಬೈ: ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 192 ಪಾಯಿಂಟ್‌ಗಳ ಕುಸಿತ ಕಂಡಿದ್ದು, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಷ್ಟ ಅನುಭವಿಸಿದೆ.
192.17 ಪಾಯಿಂಟ್‌ಗಳಷ್ಟು ಕುಸಿದ ನಂತರ, 30 ಷೇರುಗಳ ಬಿಎಸ್‌ಇ ಸೂಚ್ಯಂಕವು ಆರಂಭಿಕ ನಷ್ಟದಲ್ಲಿ 54.98 ಪಾಯಿಂಟ್‌ಗಳು ಅಥವಾ 0.10 ಶೇಕಡಾ ಕಡಿಮೆಯಾಗಿ 52,920.82ರಲ್ಲಿ ವಹಿವಾಟು ನಡೆಸಿತು. ಆದರೆ ಎನ್‌ಎಸ್‌ಇ ನಿಫ್ಟಿ 11.55 ಪಾಯಿಂಟ್ ಅಥವಾ 0.07ರಷ್ಟು ಕುಸಿದು 15,844.50ಕ್ಕೆ ತಲುಪಿದೆ.