ಕರ್ನಾಟಕ

karnataka

ETV Bharat / business

SBI ಗ್ರಾಹಕರ ಗಮನಕ್ಕೆ! ಕಾರು, ಚಿನ್ನ, ಪರ್ಸನಲ್​ ಸಾಲದ ಮೇಲೆ ಶೂನ್ಯ ಶುಲ್ಕ: ಆದ್ರೆ, ಷರತ್ತು ಅನ್ವಯ

ಎಸ್​ಬಿಐ ಯೊನೊ ಮೂಲಕ ಕಾರು, ಚಿನ್ನ ಮತ್ತು ವೈಯಕ್ತಿಕ ಸಾಲಗಳಿಗೆ ಅರ್ಜಿ ಸಲ್ಲಿಸುವ ಎಲ್ಲ ಗ್ರಾಹಕರಿಗೆ 100 ಪ್ರತಿಶತದಷ್ಟು ಸಂಸ್ಕರಣಾ ಶುಲ್ಕ ಮನ್ನಾ ಮಾಡಲಿದೆ. ಅನುಮೋದಿತ ಯೋಜನೆಗಳಲ್ಲಿ ಗೃಹ ಬಳಕೆದಾರರಿಗೆ ಗೃಹ ಸಾಲಗಳ ಸಂಸ್ಕರಣಾ ಶುಲ್ಕವನ್ನು ಸಹ ಬ್ಯಾಂಕ್ ಸಂಪೂರ್ಣವಾಗಿ ಮನ್ನಾ ಮಾಡಿದೆ. ಇದು ಕ್ರೆಡಿಟ್ ಸ್ಕೋರ್ ಮತ್ತು ಗೃಹ ಸಾಲ ಮೊತ್ತದ ಆಧಾರದ ಮೇಲೆ ಗ್ರಾಹಕರಿಗೆ ಬಡ್ಡಿದರದ ಮೇಲೆ 10 ಬೇಸಿಸ್ ಪಾಯಿಂಟ್‌ ತನಕ (ಬಿಪಿಎಸ್) ರಿಯಾಯಿತಿ ನೀಡಲಿದೆ

SBI
ಎಸ್​ಬಿಐ

By

Published : Sep 28, 2020, 3:42 PM IST

ಮುಂಬೈ:ಮುಂಬರುವ ಹಬ್ಬದ ಋತುವಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಚಿಲ್ಲರೆ ಸಾಲಗಾರರಿಗೆ ಹಬ್ಬದ ಕೊಡುಗೆಗಳನ್ನು ಘೋಷಿಸಿದೆ.

ಇದರಲ್ಲಿ ಯೊನೊ ಮೂಲಕ ಕಾರು, ಚಿನ್ನ ಮತ್ತು ವೈಯಕ್ತಿಕ ಸಾಲಗಳಿಗೆ ಅರ್ಜಿ ಸಲ್ಲಿಸುವ ಎಲ್ಲ ಗ್ರಾಹಕರಿಗೆ 100 ಪ್ರತಿಶತದಷ್ಟು ಸಂಸ್ಕರಣಾ ಶುಲ್ಕ ಮನ್ನಾ ಮಾಡಲಿದೆ.

ಯೋನೊ (ಯು ಓನ್ಲಿ ನೀಡ್ ಒನ್ ಅಪ್ಲಿಕೇಷನ್) ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಆಗಿದ್ದು, ಅನುಮೋದಿತ ಯೋಜನೆಗಳಲ್ಲಿ ಗೃಹಬಳಕೆದಾರರಿಗೆ ಗೃಹ ಸಾಲಗಳ ಸಂಸ್ಕರಣಾ ಶುಲ್ಕವನ್ನು ಸಹ ಬ್ಯಾಂಕ್ ಸಂಪೂರ್ಣವಾಗಿ ಮನ್ನಾ ಮಾಡಿದೆ. ಇದು ಕ್ರೆಡಿಟ್ ಸ್ಕೋರ್ ಮತ್ತು ಗೃಹ ಸಾಲ ಮೊತ್ತದ ಆಧಾರದ ಮೇಲೆ ಗ್ರಾಹಕರಿಗೆ ಬಡ್ಡಿದರದ ಮೇಲೆ 10 ಬೇಸಿಸ್ ಪಾಯಿಂಟ್‌ ತನಕ (ಬಿಪಿಎಸ್) ರಿಯಾಯಿತಿ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದರ ಜೊತೆಗೆ ಹೆಚ್ಚುವರಿಯಾಗಿ ವಸತಿ ಖರೀದಿದಾರರಿಗೆ ಯೋನೊ ಮೂಲಕ ಅರ್ಜಿ ಸಲ್ಲಿಸಿದರೆ 5 ಬಿಪಿಎಸ್ ಬಡ್ಡಿ ರಿಯಾಯತಿ ಪಡೆಯಬಹುದು. ಕಾರು ಸಾಲ ಸಾಲಗಾರರಿಗೆ ಶೇ 7.5 ರಿಂದ ಪ್ರಾರಂಭವಾಗುವ ಅತ್ಯಂತ ಕಡಿಮೆ ಬಡ್ಡಿದರ ನೀಡುತ್ತಿದೆ. ಆಯ್ದ ಮಾದರಿಗಳಲ್ಲಿ ಗ್ರಾಹಕರು ಶೇ 100ರಷ್ಟು ಆನ್ - ರೋಡ್ ಫೈನಾನ್ಸ್ ಪಡೆಯಲಿದ್ದಾರೆ.

ಎಸ್‌ಬಿಐ ಗೃಹ ಸಾಲಗಳಲ್ಲಿ ಶೇ 34ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ವಾಹನ ಸಾಲ ವಿಭಾಗದಲ್ಲಿ ಶೇ 33ರಷ್ಟು ಪಾಲಿದೆ. ಸಾಲ ನೀಡುವವರು ಶೇ 7.5ರಷ್ಟು ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ಒದಗಿಸುತ್ತಿದ್ದು, 36 ತಿಂಗಳವರೆಗೆ ಹೊಂದಾಣಿಕೆಯ ಮರುಪಾವತಿ ಆಯ್ಕೆಗಳಿವೆ. ಗ್ರಾಹಕರು ವೈಯಕ್ತಿಕ ಸಾಲಗಳನ್ನು ಶೇ 9.6ಕ್ಕಿಂತ ಕಡಿಮೆ ಸಾಲ ದರದಲ್ಲಿ ತೆಗೆದುಕೊಳ್ಳಬಹುದು ಎಂದು ತಿಳಿಸಿದೆ.

ಆರ್ಥಿಕತೆಯು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದು, ಗ್ರಾಹಕರ ಖರ್ಚಿನಲ್ಲಿ ಹೆಚ್ಚಳ ಕಾಣಬಹುದೆಂದು ನಾವು ಭಾವಿಸುತ್ತೇವೆ. ಅದೇ ಸಮಯದಲ್ಲಿ ಅವರ ಆರ್ಥಿಕ ಅಗತ್ಯಗಳನ್ನು ಹಬ್ಬದ ಋತುವಿನಲ್ಲಿ ತಮ್ಮದಾಗಿಸಿಕೊಳ್ಳಲು ಎಸ್‌ಬಿಐ ಎಲ್ಲರಿಗೂ ನೆರವಾಗಲಿದೆ ಎಂದು ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ (ಚಿಲ್ಲರೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ) ಸಿಎಸ್ ಶೆಟ್ಟಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ABOUT THE AUTHOR

...view details