ಮುಂಬೈ:ಬ್ಯಾಡ್ ಬ್ಯಾಂಕ್ ಅನುಷ್ಠಾನಗೊಳಿಸುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೇರಿದಂತೆ ಹಲವೆಡೆಯಿಂದ ಅಗತ್ಯ ಅನುಮೋದನೆಗಳನ್ನು ಪಡೆಯಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಪಷ್ಟನೆ ನೀಡಿದೆ.
ಇದರ ಜೊತೆಗೆ ಭಾರತೀಯ ಸಾಲ ಪರಿಹಾರ ಕಂಪನಿ (IDRCL-India Debt Resolution Company) ಅನುಷ್ಠಾನಗೊಳಿಸಲೂ ಆರ್ಬಿಐನಿಂದ ಅನುಮೋದನೆಗಳನ್ನು ಪಡೆಯಲಾಗಿದ್ದು, ಈಗಾಗಲೇ ಬ್ಯಾಡ್ ಬ್ಯಾಂಕ್ ಮತ್ತು ಭಾರತೀಯ ಸಾಲ ಪರಿಹಾರ ಕಂಪನಿಗಳು ಹಲವಡೆ ಕಾರ್ಯನಿರ್ವಹಿಸುತ್ತಿವೆ.
ಏನಿದು ಬ್ಯಾಡ್ ಬ್ಯಾಂಕ್?:ಬ್ಯಾಡ್ ಬ್ಯಾಂಕ್ ಎಂಬುದು ಆಡುಭಾಷೆಯಲ್ಲಿ ಕರೆಯಲಾಗುವ ಪದವಾಗಿದ್ದು, ಇದನ್ನು ರಾಷ್ಟ್ರೀಯ ಆಸ್ತಿ ಪುನರ್ನಿರ್ಮಾಣ ಕಂಪನಿ (NARCL- National Asset Reconstruction Company) ಎಂದು ವ್ಯಾವಹಾರಿಕ ಪರಿಭಾಷೆಯಲ್ಲಿ ಕರೆಯಲಾಗುತ್ತದೆ.
ಸರಳವಾಗಿ ಹೇಳುವುದಾದರೆ, ವಸೂಲಾಗದ ಸಾಲದ ಮೊತ್ತವನ್ನು ವಸೂಲಿ ಮಾಡುವ ಸಲುವಾಗಿರುವ ಸಂಸ್ಥೆಯೇ ಬ್ಯಾಡ್ ಬ್ಯಾಂಕ್ ಆಗಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ವಸೂಲಿಯಾಗದ ಸಾಲಗಳನ್ನು ಈ ಬ್ಯಾಂಕ್ಗೆ ವರ್ಗಾಯಿಸುವ ಮೂಲಕ ಬ್ಯಾಂಕ್ಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲಾಗುತ್ತದೆ. ಒಂದು ಬಾರಿ ವರ್ಗಾವಣೆಯಾದ ಸಾಲವನ್ನು ಕೊನೆಯ ತನಕ ನಿರ್ವಹಿಸುವ ಜವಾಬ್ದಾರಿ ಈ ಬ್ಯಾಡ್ ಬ್ಯಾಂಕ್ ಮೇಲಿದೆ.