ಮುಂಬೈ: ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಪ್ರಶ್ನೆಯ ಮೂಲಕ ಪಡೆಯದ ಬಿಡುಗಡೆ ಆಗದ ವರದಿಯ ಪ್ರತಿ ಪ್ರಕಾರ, ಎಟಿಎಂ ಶುಲ್ಕದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಚಿಸಿದ್ದ ಸಮಿತಿಯು ₹ 5,000ಕ್ಕಿಂತ ಹೆಚ್ಚಿನ ಹಣ ಹಿಂಪಡೆಯುವ ಗ್ರಾಹಕರಿಗೆ ಶುಲ್ಕ ವಿಧಿಸಲು ಶಿಫಾರಸು ಮಾಡಿತ್ತು ಎಂಬುದು ತಿಳಿದುಬಂದಿದೆ.
ಎಟಿಎಂಗಳಿಂದ ಹೆಚ್ಚಿನ ಹಣ ಹಿಂಪಡೆಯುವುದನ್ನು ನಿರುತ್ಸಾಹಗೊಳಿಸಲು, ಉಚಿತ ವಹಿವಾಟಿಗೆ ಪರಿಗಣಿಸಬೇಕಾದ ನಗದು 5,000 ರೂ. ವರೆಗೆ ಉಚಿತವಾಗಿ ಹಿಂತೆಗೆದುಕೊಳ್ಳಬಹುದು. ವೈಯಕ್ತಿಕ 5,000 ರೂ.ಗಿಂತ ಹೆಚ್ಚಿನ ಪ್ರತಿ ವಹಿವಾಟಿಗೆ ಬ್ಯಾಂಕ್ಗಳು ಗ್ರಾಹಕರ ಮೇಲೆ ಶುಲ್ಕ ವಿಧಿಸಬಹುದು ಎಂದು ಭಾರತೀಯ ಬ್ಯಾಂಕ್ಗಳ ಸಂಘದ ಅಂದಿನ ಮುಖ್ಯ ಕಾರ್ಯನಿರ್ವಾಹಕ ವಿ.ಜಿ. ಕಣ್ಣನ್ ಅವರ ನೇತೃತ್ವದ ಸಮಿತಿಯು ವರದಿಯಲ್ಲಿ ತಿಳಿಸಿತ್ತು. ಇದನ್ನು 2019ರ ಅಕ್ಟೋಬರ್ 22ರಂದು ಕೇಂದ್ರ ಬ್ಯಾಂಕ್‌ಗೆ ಸಲ್ಲಿಸಲಾಗಿತ್ತು. ಆದರೆ. ಈ ವರದಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.
ಎಲ್ ಶ್ರೀಕಾಂತ್ ಎಂಬುವರು ಆರ್‌ಟಿಐ ಅಡಿಯಲ್ಲಿ ಈ ಬಗ್ಗೆ ಮಾಹಿತಿ ಕೋರಿದ್ದರು. ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ಇದನ್ನು ಆರ್‌ಬಿಐ ವಿಶ್ವಾಸಾರ್ಹ ಸಾಮರ್ಥ್ಯದಲ್ಲಿ ಇಟ್ಟುಕೊಂಡಿದೆ. ಆರ್‌ಟಿಐ ಕಾಯ್ದೆಯ ಸೆಕ್ಷನ್ 8 (1) (ಇ) ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಕೋರಿಕೆಯನ್ನು ತಿರಸ್ಕರಿಸಿದ್ದರು.