ಮುಂಬೈ:ಆರ್.ಸುಬ್ರಮಣಿಯನ್, ಆರ್.ಎಸ್.ರಾಥೋ ಮತ್ತು ರೋಹಿತ್ ಜೈನ್ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿದೆ.
ವಿದೇಶಿ ವಿನಿಮಯ ಇಲಾಖೆ, ಹಣಕಾಸು ಮಾರುಕಟ್ಟೆಗಳ ನಿಯಂತ್ರಣ ವಿಭಾಗ, ಆಂತರಿಕ ಸಾಲ ನಿರ್ವಹಣೆ ಮತ್ತು ಅಂತಾರಾಷ್ಟ್ರೀಯ ಇಲಾಖೆಯ ನಿರ್ವಹಣೆ ಸುಬ್ರಮಣಿಯನ್ ಅವರಿಗೆ ವಹಿಸಲಾಗಿದೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ.
ಸುಬ್ರಮಣಿಯನ್ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಬಡ್ತಿ ಪಡೆಯುವುದಕ್ಕೂ ಮೊದಲು ಇಡಿ ಮುಖ್ಯ ಜನರಲ್ ಮ್ಯಾನೇಜರ್ - ಇನ್-ಚಾರ್ಜ್ ಆಗಿದ್ದರು.
ಹಣಕಾಸು ಮಾರುಕಟ್ಟೆ ಕಾರ್ಯಾಚರಣೆ ವಿಭಾಗ, ಬಾಹ್ಯ ಹೂಡಿಕೆ ಮತ್ತು ಕಾರ್ಯಾಚರಣೆಗಳ ಇಲಾಖೆ, ಕಾನೂನು ಇಲಾಖೆ ಮತ್ತು ಕಾರ್ಯದರ್ಶಿಗಳ ಇಲಾಖೆಯನ್ನು ನೋಡಿಕೊಳ್ಳಲಿರುವ ರಾಥೋ ಅವರು, ರಾಥೋ ಫೈನಾನ್ಷಿಯಲ್ ಮಾರುಕಟ್ಟೆ ಕಾರ್ಯಾಚರಣೆ ವಿಭಾಗದ ಮುಖ್ಯ ಜನರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಮೇಲ್ವಿಚಾರಣಾ ಇಲಾಖೆ (ಅಪಾಯ, ವಿಶ್ಲೇಷಣೆ ಮತ್ತು ದುರ್ಬಲತೆ ಮೌಲ್ಯಮಾಪನ) ನಿರ್ವಹಣೆ ಹೊರಲಿರುವ ಜೈನ್ ಅವರು, ಈ ಮೊದಲು ಮೇಲ್ವಿಚಾರಣಾ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು.