ಕರ್ನಾಟಕ

karnataka

By

Published : Feb 23, 2021, 9:09 PM IST

ETV Bharat / business

ಸರಿಯಾದ ಪ್ರಮಾಣೀಕರಣವಿಲ್ಲದ ಪತಂಜಲಿಯ 'ಕೊರೊನಿಲ್​' ಮಾರಾಟಕ್ಕೆ ಅನುಮತಿ ಇಲ್ಲ: ಮಹಾ ಗೃಹ ಸಚಿವ

ಡಬ್ಲ್ಯುಹೆಚ್‌ಒ, ಐಎಂಎ ಮತ್ತು ಇತರ ಸಮರ್ಥ ಆರೋಗ್ಯ ಸಂಸ್ಥೆಗಳಿಂದ ಸರಿಯಾದ ಪ್ರಮಾಣೀಕರಣವಿಲ್ಲದೆ ಕೊರೊನಿಲ್ ಮಾರಾಟವನ್ನು ಮಹಾರಾಷ್ಟ್ರದಲ್ಲಿ ಅನುಮತಿಸಲಾಗುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ಟ್ವೀಟ್ ಮಾಡಿದ್ದಾರೆ.

Coronil
Coronil

ಮುಂಬೈ:ಸರಿಯಾದ ಪ್ರಮಾಣೀಕರಣ ಇಲ್ಲದೆ ಪತಂಜಲಿಯ ಕೊರೊನಿಲ್ ಮಾತ್ರೆಗಳ ಮಾರಾಟವನ್ನು ಮಹಾರಾಷ್ಟ್ರದಲ್ಲಿ ಅನುಮತಿಸಲು ಆಗುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.

ಕೊರೊನಿಲ್ ಮಾತ್ರೆಗಳಿಗೆ ಡಬ್ಲ್ಯುಹೆಚ್‌ಒ ಪ್ರಮಾಣೀಕರಣ ಪಡೆಯಬೇಕೆಂಬ ಪತಂಜಲಿಯ ರೈಟ್ಸ್​ ಬಗ್ಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆಘಾತ ವ್ಯಕ್ತಪಡಿಸಿದ ಒಂದು ದಿನದ ನಂತರ ದೇಶ್ಮುಖ್ ಈ ಹೇಳಿಕೆ ನೀಡಿದ್ದಾರೆ. ಇದು ಕೋವಿಡ್​-19 ವಿರುದ್ಧ ಹೋರಾಡಲು ಪುರಾವೆ ಆಧಾರಿತ ಔಷಧವಾಗಿದೆ ಎಂದು ಹೇಳಿದೆ.

ಕೋವಿಡ್​-19 ಚಿಕಿತ್ಸೆಗಾಗಿ ಯಾವುದೇ ಸಾಂಪ್ರದಾಯಿಕ ಔಷಧದ ಪರಿಣಾಮಕಾರಿ ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್​ಒ) ಸ್ಪಷ್ಟಪಡಿಸಿದೆ. ಔಷಧಿ ಬಿಡುಗಡೆಗೆ ಹಾಜರಾಗಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಅವರಿಂದ ವಿವರಣೆಯನ್ನು ಐಎಂಎ ಕೋರಿದೆ.

ಇದನ್ನೂ ಓದಿ: 24 ಲಕ್ಷ ರೂ. ದುಬಾರಿ ಬೆಲೆಯ BMW ಆರ್​ 18 ಬೈಕ್​ ಲಾಂಚ್​: ಫೀಚರ್​ ಕೇಳಿದ್ರೆ ಖರೀದಿಗೆ ಮನಸ್ಸು ಹಾತೊರೆಯುತ್ತೆ!

ದೇಶ್ಮುಖ್ ಕೊರೊನಿಲ್​ ಮಾರಾಟದ ಬಗ್ಗೆ ಟ್ವೀಟ್ ಮಾಡಿ, ಐಎಂಎ ಕೊರೊನಿಲ್ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಶ್ನಿಸಿದೆ. ಕೋವಿಡ್-19 ಚಿಕಿತ್ಸೆಯಲ್ಲಿ ಅದರ ಪರಿಣಾಮದ ಬಗ್ಗೆ ಯಾವುದೇ ಪ್ರಮಾಣಪತ್ರವನ್ನು ನೀಡದ ಪತಂಜಲಿ ಆಯುರ್ವೇದದ ಸುಳ್ಳು ರೈಟ್ಸ್​​​​ಅನ್ನು ಡಬ್ಲ್ಯುಹೆಚ್ಒ ನಿರಾಕರಿಸಿದೆ ಎಂದು ಬರೆದುಕೊಂಡಿದ್ದಾರೆ.

ಸರಿಯಾದ ಪ್ರಮಾಣೀಕರಣ ಇಲ್ಲದೆ ಕೊರೊನಿಲ್ ಅನುಮೋದನೆ ಶೋಚನೀಯ ಎಂದಿರುವ ದೇಶ್ಮುಖ್, ಇಂತಹ ಔಷಧಿಯನ್ನು ಅವಸರದಿಂದ ಪ್ರಾರಂಭಿಸುವುದು ಮತ್ತು ಇಬ್ಬರು ಕೇಂದ್ರ ಸಚಿವರು ಅನುಮೋದನೆ ನೀಡಿದ್ದು ಅತ್ಯಂತ ಶೋಚನೀಯ. ಡಬ್ಲ್ಯುಎಚ್‌ಒ, ಐಎಂಎ ಮತ್ತು ಇತರ ಸಮರ್ಥ ಆರೋಗ್ಯ ಸಂಸ್ಥೆಗಳಿಂದ ಸರಿಯಾದ ಪ್ರಮಾಣೀಕರಣವಿಲ್ಲದೆ ಕೊರೊನಿಲ್ ಮಾರಾಟವನ್ನು ಮಹಾರಾಷ್ಟ್ರದಲ್ಲಿ ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ABOUT THE AUTHOR

...view details