ಕರ್ನಾಟಕ

karnataka

ETV Bharat / business

ಔಷಧಿ, ಉಪಕರಣಗಳ ಕೊರತೆ ಇಲ್ಲ: ಡಿವಿ ಸದಾನಂದ ಗೌಡ ಸ್ಪಷ್ಟನೆ - ವೈದ್ಯಕೀಯ ಸರಕು

"ಕೋವಿಡ್​-19 ಸೋಂಕಿನ ವಿರುದ್ಧ ಹೋರಾಡಲು ಎಲ್ಲ ಅಗತ್ಯ ವೈದ್ಯಕೀಯ ಸರಬರಾಜುಗಳ ದಾಸ್ತಾನು ಇವೆ ಎಂಬುದನ್ನು ಕೇಂದ್ರ ಸರ್ಕಾರ ಖಚಿತಪಡಿಸುತ್ತಿದೆ. 62 ಉಡಾನ್ ವಿಮಾನಗಳು ಕಳೆದ ಐದು ದಿನಗಳಲ್ಲಿ 15.4 ಟನ್​ಗಳಷ್ಟು ಅಗತ್ಯ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡಿದೆ ಎಂದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನದ ಗೌಡ ಟ್ವೀಟ್ ಮಾಡಿದ್ದಾರೆ.

ಔಷಧಿ
COVID-19

By

Published : Apr 3, 2020, 11:08 PM IST

ನವದೆಹಲಿ: ಕೋವಿಡ್​-19 ಸೋಂಕಿನ ವಿರುದ್ಧ ಹೋರಾಡಲು ದೇಶಾದ್ಯಂತ ವೈದ್ಯಕೀಯ ಸಾಮಗ್ರಿಗಳ ಕೊರತೆಯಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೋವಿಡ್​-19 ಸೋಂಕಿನ ವಿರುದ್ಧ ಹೋರಾಡಲು ಎಲ್ಲ ಅಗತ್ಯ ವೈದ್ಯಕೀಯ ಸರಬರಾಜುಗಳ ದಾಸ್ತಾನು ಇವೆ ಎಂಬುದನ್ನು ಕೇಂದ್ರ ಸರ್ಕಾರ ಖಚಿತಪಡಿಸುತ್ತಿದೆ. 62 ಉಡಾನ್ ವಿಮಾನಗಳು ಕಳೆದ ಐದು ದಿನಗಳಲ್ಲಿ 15.4 ಟನ್​ಗಳಷ್ಟು ಅಗತ್ಯ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡಿದೆ ಎಂದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನದ ಗೌಡ ಟ್ವೀಟ್ ಮಾಡಿದ್ದಾರೆ.

ಅಗತ್ಯ ಔಷಧ ವಸ್ತುಗಳು ಮತ್ತು ಆಸ್ಪತ್ರೆ ಸಾಧನಗಳ ಉತ್ಪಾದನಾ ಚಟುವಟಿಕೆಗಳ ಬಗ್ಗೆಯೂ ಸರ್ಕಾರ ಸಂಪೂರ್ಣ ಗಮನ ಹರಿಸುತ್ತಿದೆ. ಇದಕ್ಕಾಗಿ ಎಸ್‌ಇ ಝಡ್‌ಗಳಲ್ಲಿ 200ಕ್ಕೂ ಹೆಚ್ಚು ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಅಗತ್ಯ ವೈದ್ಯಕೀಯ ವಸ್ತುಗಳ ವಿತರಣೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಲಾಜಿಸ್ಟಿಕ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದು ಅವರು ದೇಶದ ಜನರಿಗೆ ಮಾಹತಿ ನೀಡಿದ್ದಾರೆ.

ABOUT THE AUTHOR

...view details