ಬೆಂಗಳೂರು:ಭಾರತದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಜ್ (Mercedes Benz) ಕಂಪನಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಅಕ್ಷಯ್ ಮೋಟರ್ಸ್ ಹೆಸರಿನಲ್ಲಿ ವರ್ಕ್ಶಾಪ್ ಆರಂಭಿಸಿದೆ.
ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಮರ್ಸಿಡಿಸ್ ಬೆಂಜ್ ಕಾರಿನ ವರ್ಕ್ಶಾಪ್ ಮಳಿಗೆ ಆರಂಭ - ವರ್ಕ್ಶಾಪ್ ಮಳಿಗೆ ಆರಂಭ
ಬೆಂಗಳೂರಿನಲ್ಲಿರುವ ಮರ್ಸಿಡಿಸ್ ಬೆಂಜ್ (Mercedes Benz workshop) ವರ್ಕ್ ಶಾಪ್ 20 ಸಾವಿರ ಚದರ ಅಡಿಯಷ್ಟು ವಿಶಾಲವಾಗಿದ್ದು, ವೃತ್ತಿಪರ ತರಬೇತಿ ಪಡೆದ 50 ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ಧಾರೆ. ಪ್ರತಿವರ್ಷ 4,500 ಕಾರುಗಳನ್ನು ಸರ್ವೀಸ್ ಮಾಡುವ ಸಾಮರ್ಥ್ಯ ಹೊಂದಿದೆ.
ಮರ್ಸಿಡಿಸ್- ಬೆಂಜ್ ಭಾರತೀಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್ ಷ್ವೆಂಕ್, ಮರ್ಸಿಡಿಸ್-ಬೆಂಜ್ ಇಂಡಿಯಾದ ಗ್ರಾಹಕ ಸೇವೆಗಳು ಮತ್ತು ಕಾರ್ಪೊರೇಟ್ ವ್ಯವಹಾರಗಳ ಉಪಾಧ್ಯಕ್ಷ ಶೇಖರ್ ಭಿಡೆ, ಅಕ್ಷಯ ಮೋಟರ್ಸ್ನ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಪಿ.ಶ್ಯಾಮ್ ಶೆಟ್ಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನಲ್ಲಿರುವ ಈ ವರ್ಕ್ ಶಾಪ್ 20 ಸಾವಿರ ಚದರ ಅಡಿಯಷ್ಟು ವಿಶಾಲವಾಗಿದ್ದು, ವೃತ್ತಿಪರ ತರಬೇತಿ ಪಡೆದ 50 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ಧಾರೆ. ಪ್ರತಿವರ್ಷ 4,500 ಕಾರುಗಳನ್ನು ಸರ್ವೀಸ್ ಮಾಡುವ ಸಾಮರ್ಥ್ಯ ಹೊಂದಿದೆ. ಕಂಪನಿಯ ಎಲ್ಲಾ ಮಾದರಿಯ ಕಾರುಗಳಿಗೆ ಈ ವರ್ಕ್ಶಾಪ್ನಲ್ಲಿ ಸರ್ವೀಸ್ ಸಿಗಲಿದೆ ಎಂದು ಕಂಪನಿ ತಿಳಿಸಿದೆ.