ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ(2021-22) ಅಕ್ಟೋಬರ್ 18ರವರೆಗೆ ಆದಾಯ ತೆರಿಗೆ ಇಲಾಖೆ 63.23 ಲಕ್ಷಕ್ಕೂ ಅಧಿಕ ತೆರಿಗೆ ಪಾವತಿದಾರರಿಗೆ 92,961 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಹಣ ಮರುಪಾವತಿ ಮಾಡಿದೆ. ಇದರ ಜೊತೆಗೆ 1.69 ಲಕ್ಷ ಪ್ರಕರಣಗಳಲ್ಲಿ 69, 934 ಕೋಟಿ ರೂ. ಕಾರ್ಪೊರೇಟ್ ತೆರಿಗೆ ಹಣ ಮರುಪಾವತಿ ಮಾಡಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(CBDT) ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದೆ. ಹೀಗಾಗಿ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಇದನ್ನೂ ಓದಿರಿ:ಸಿನಿಮೀಯ ಸ್ಟೈಲ್ನಲ್ಲಿ ಬ್ಯಾಂಕ್ ದರೋಡೆ.. 2 ಕೋಟಿ ಮೌಲ್ಯದ ಚಿನ್ನ, 31 ಲಕ್ಷ ರೂ.ದೋಚಿದ ಕಳ್ಳರು
ಏಪ್ರಿಲ್ 1, 2021ರಿಂದ ಅಕ್ಟೋಬರ್ 18,2021ರವರೆಗೆ 63.23 ಲಕ್ಷಕ್ಕೂ ಅಧಿಕ ತೆರಿಗೆದಾರರಿಗೆ 92,961 ಕೋಟಿ ರೂ. ಮರುಪಾವತಿ ಮಾಡಲಾಗಿದೆ. ಒಟ್ಟು 61,53,231 ವೈಯಕ್ತಿಕ ಪ್ರಕರಣಗಳಲ್ಲಿ 23,026 ಕೋಟಿ ರೂ ಹಾಗೂ ಕಾರ್ಪೋರೇಟ್ ವಲಯದ 1,69,355 ಕೇಸ್ಗಳಲ್ಲಿ 69,934 ಕೋಟಿ ರೂ. ಮರುಪಾವತಿ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಸಿಬಿಡಿಟಿ(CBDT) ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 92,961 ಕೋಟಿ ರೂ. ಮರುಪಾವತಿ ಮಾಡಿದ್ದು, ಕಳೆದ ವರ್ಷದ ಹಣಕ್ಕಿಂತಲೂ ಹೆಚ್ಚಾಗಿದೆ ಎಂದು ಹೇಳಿಕೊಂಡಿದೆ. ಮರುಪಾವತಿ ಹಣ ನೇರವಾಗಿ ತೆರಿಗೆದಾರರ ಬ್ಯಾಂಕ್ ಖಾತೆಗೆ ಜಮಾವಣೆಗೊಳ್ಳಲಿದೆ ಎಂಬ ಮಾಹಿತಿ ಕೂಡ ಹಂಚಿಕೊಂಡಿದೆ.