ನವದೆಹಲಿ: ಎಂಆರ್ಎನ್ಎ ಆಧಾರಿತ ಲಸಿಕೆ, ಡಿಎನ್ಎ ಆಧಾರಿತ ಲಸಿಕೆ, ವೆಕ್ಟರ್ ಆಧಾರಿತ ಲಸಿಕೆ, ಅಥವಾ ಲೈವ್ ಅಟೆನ್ಯುವೇಟೆಡ್ ಲಸಿಕೆಗಳಂತಹ ಎಲ್ಲಾ ಲಸಿಕೆ ಪ್ಲಾಟ್‌ಫಾರ್ಮ್‌ಗಳಲ್ಲಿ, ಕೋವಿಡ್ -19ಗಾಗಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳು ಸುರಕ್ಷಿತವೆಂದು ಭಾರತ್ ಬಯೋಟೆಕ್ ಹೇಳಿದೆ.
'ಇದು ಭಾರತ್ ಬಯೋಟೆಕ್ ಬಿಬಿವಿ -152 ಹೋಲ್-ವೈರಿಯನ್ SARS-CoV-2 ಲಸಿಕೆ. ಈ ಲಸಿಕೆಗಳು ಸುರಕ್ಷಿತವಾಗಿವೆ ಮತ್ತು ಪ್ರತಿಕೂಲ ಅಡ್ಡಪರಿಣಾಮಗಳು ಕಡಿಮೆ ಇವೆ. ಹಂತ 1 ಮತ್ತು 2 ಕ್ಲಿನಿಕಲ್ ಪ್ರಯೋಗಗಳಲ್ಲಿ ಸುಮಾರು 755 ಮಂದಿ ಭಾಗವಹಿಸಿದ್ದರು. ಅವರಿಗೆ ಲಸಿಕೆ ನೀಡಲಾಗಿದೆ. ಈ ಪ್ರಯೋಗಗಳಲ್ಲಿ ಯಾವುದೇ ಗಂಭೀರ ಪ್ರತಿಕೂಲ ಪರಿಣಾಮಗಳು ಎದುರಾಗಿಲ್ಲ. ಬಿಬಿವಿ -152 ಲಸಿಕೆಯು ವ್ಯಾಕ್ಸಿನೇಷನ್ ಮಾಡಿದ 14 ದಿನಗಳ ನಂತರ ಪರಿಣಾಮ ಬೀರಲಿದೆ. ಆದ್ದರಿಂದ ಪ್ರಯೋಗದಲ್ಲಿ ಭಾಗಿಯಾಗುವವರು ಮುನ್ನೆಚ್ಚರಿಕೆ ವಹಿಸಬೇಕು.