ಮುಂಬೈ :ದೇಶದಲ್ಲಿನ 40 ಕೋಟಿ ಉದ್ಯೋಗದಾರರಲ್ಲಿ ಅರ್ಧದಷ್ಟು ಮಂದಿ ಸಾಲ ಪಡೆದಿರುತ್ತಾರೆ. ಕನಿಷ್ಠ ಒಂದು ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿರುತ್ತಾರೆ ಎಂದು ಕ್ರೆಡಿಟ್ ಇನ್‌ಫಾರ್ಮೇಷನ್ ಕಂಪನಿ(CIC) ಹೇಳಿದೆ. ಬ್ಯಾಂಕ್‌ಗಳ ಆಧಾರದ ಮೇಲೆ ಹೊಸ ಗ್ರಾಹಕರಿಗೆ ವೇಗವಾಗಿ ಸಾಲ ನೀಡುವ ಮೂಲಕ ಅವರನ್ನು ಸಾಲ ನೀಡುವ ಸಂಸ್ಥೆಗಳು ತಲುಪುತ್ತಿವೆ ಎಂದು ಟ್ರಾನ್ಸ್ ಯುನಿಯನ್ ಸಿಬಐಬಿಐಎಲ್ ತಿಳಿಸಿದೆ.
2021ರ ಜನವರಿ ವೇಳೆಗೆ ಭಾರತದಲ್ಲಿ ಒಟ್ಟಾರೆಯಾಗಿ ಅಂದಾಜು 40 ಕೋಟಿ ಮಂದಿ ಉದ್ಯೋಗಿಗಳು ಇದ್ದಾರೆ. ಚಿಲ್ಲರೆ ಕ್ರೆಡಿಟ್ ಮಾರುಕಟ್ಟೆಯಲ್ಲಿ ಸಕ್ರಿಯವಾಗಿರುವ 20 ಕೋಟಿ ಉದ್ಯೋಗಿಗಳು ಇದ್ದಾರೆ ಎಂದು ಅದು ಹೇಳಿದೆ. ದೀರ್ಘಕಾಲದವರೆಗೆ, ಸಾಲದ ಬಲೆಯಲ್ಲಿ ಸಿಲುಕಿ ಬಡ್ಡಿ ಹಾಗೂ ಲೋನ್ ಪಾವತಿಸುವಲ್ಲೇ ಜೀವನ ಕೊನೆಗೊಳ್ಳುವ ಬಗ್ಗೆ ಕಳವಳ ಇದೆ ಎಂದಿದೆ.
ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ 18-33 ವರ್ಷದೊಳಗಿನ 40 ಕೋಟಿ ಜನ ಕೆಲಸದ ಸ್ಥಳದ ವಿಳಾಸ ನೀಡಿದ್ದಾರೆ ಎಂದು ಸಿಐಸಿಯ ಅಂಕಿ-ಅಂಶಗಳು ತಿಳಿಸಿವೆ. ಈ ವಿಭಾಗದಲ್ಲಿ ಸಾಲ ನೀಡುವಿಕೆಯು ಕೇವಲ ಶೇ.8ರಷ್ಟು ಮಾತ್ರ ಎಂದು ಹೇಳಿದೆ.