ನವದೆಹಲಿ: ಸಿಗರೇಟ್ಗಳನ್ನು ಅಕ್ರಮವಾಗಿ ತಯಾರಿಸಿ ಸರಬರಾಜು ಮಾಡಿದ ಆರೋಪದ ಮೇಲೆ ಜಿಎಸ್‌ಟಿ ತನಿಖಾ ವಿಭಾಗದ ಡಿಜಿಜಿಐ ಅಧಿಕಾರಿಗಳು ಹರಿಯಾಣದ ನಿವಾಸಿಯೊಬ್ಬರನ್ನು ಬಂಧಿಸಿದ್ದಾರೆ.
ಸಿಗರೇಟ್ ಅಕ್ರಮ ಮಾರಾಟ ಜಾಲ ಪತ್ತೆ ಹಚ್ಚಿದ ಅಧಿಕಾರಿಗಳು, ಈ ಮೂಲಕ 129 ಕೋಟಿ ರೂ. ತೆರಿಗೆ ವಂಚನೆ ತಪ್ಪಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಗುರುಗ್ರಾಮ್ ವಲಯ ಘಟಕ (ಜಿ ಝ್ಯಡ್ಯು), ಹರಿಯಾಣದ ನಿವಾಸಿ ಸತ್ಯೇಂದರ್ ಶರ್ಮಾ ಎಂಬಾತನನ್ನು ಬಂಧಿಸಿದೆ. ತೆರಿಗೆ ಪಾವತಿಸಿರುವ ಬಗ್ಗೆ ಅಧಿಕೃತ ದಾಖಲೆಗಳಿಲ್ಲದೆ, ನಿಯಮಗಳಿಗೆ ಅನುಗುಣವಾಗಿ ಜಿಎಸ್‌ಟಿ, ಸೆಸ್ ಪಾವತಿಸದೆ ಮತ್ತು ಕಾನೂನು ಬಾಹಿರವಾಗಿ ಸಿಗರೇಟ್ ತಯಾರಿಕೆ ಹಾಗೂ ಸರಬರಾಜು ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.