ಕರ್ನಾಟಕ

karnataka

ETV Bharat / business

ಜಿಎಸ್‌ಟಿ ಮಂಡಳಿ ಸಭೆ:  ಪ್ರಮುಖ ಐದು ವಿಷಯಗಳ ಬಗ್ಗೆ ಚರ್ಚೆ ಸಾಧ್ಯತೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ 40ನೇ ಜಿಎಸ್‌ಟಿ ಮಂಡಳಿ ಸಭೆ ಇಂದು ನಡೆಯಲಿದೆ. ಕೋವಿಡ್‌-19 ದೇಶದಲ್ಲಿ ಕಾಣಿಸಿಕೊಂಡ ಬಳಿಕ ನಡೆಯುತ್ತಿರುವ ಜಿಎಸ್‌ಟಿ ಮಂಡಳಿ ಸಭೆಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಲಾಗುತ್ತಿದೆ. ಐದು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.

gst-council-meets-today-for-first-time-post-lockdown-top-5-points-on-table
ಇಂದು ಜಿಎಸ್‌ಟಿ ಮಂಡಳಿ ಸಭೆ; ಪ್ರಮುಖ ಐದು ವಿಷಯಗಳ ಬಗ್ಗೆ ಚರ್ಚೆ ಸಾಧ್ಯತೆ

By

Published : Jun 12, 2020, 12:47 PM IST

ನವದೆಹಲಿ:ಲಾಕ್‌ಡೌನ್‌ ತೆರವಿನ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ 40ನೇ ಜಿಎಸ್‌ಟಿ ಮಂಡಳಿ ಸಭೆ ಇಂದು ನಡೆಯಲಿದೆ. ಕೋವಿಡ್‌-19 ದೇಶದಲ್ಲಿ ಕಾಣಿಸಿಕೊಂಡ ಬಳಿಕ ನಡೆಯುತ್ತಿರುವ ಜಿಎಸ್‌ಟಿ ಮಂಡಳಿ ಸಭೆಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಲಾಗುತ್ತಿದೆ.

ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಿರುವ ವಿಷಯಗಳು ಹೀಗಿವೆ.

1. ಈಗಾಗಲೇ ಬಾಕಿ ಉಳಿಸಿಕೊಂಡಿರುವ ಹಳೆಯ ತೆರಿಗೆ ಸಲ್ಲಿಕೆಗೆ ವಿಳಂಬ ಶುಲ್ಕ‌ ವಿಧಿಸುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

6 ತಿಂಗಳ ಜಿಎಸ್‌ಟಿ ಪಾವತಿ ಮಾಡಿಲ್ಲ ಎಂದರೆ 10 ಸಾವಿರ ರೂಪಾಯಿಗೆ ದಿನಕ್ಕೆ 50 ರೂಪಾಯಿಯಂತೆ ದಂಡವಿದೆ. ಇದು ವ್ಯಾಪಾರಿಗಳ ಮೇಲೆ ಭಾರಿ ಒತ್ತಡಕ್ಕೆ ಕಾರಣವಾಗಿದೆ.

2. ಜುಲೈ 2017 ರಿಂದ ಜನವರಿ 2020ರ ವರೆಗಿನ ಅವಧಿಯಲ್ಲಿ ತಡವಾಗಿ ಜಿಎಸ್‌ಟಿ ಸಲ್ಲಿಕೆ ಮಾಡಿರುವುದಕ್ಕೆ ವಿಧಿಸುವ ದಂಡ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ. ಜೊತೆಗೆ ಕೆಲ ಪರಿಹಾರದ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಿದ್ದಾರೆ ಎನ್ನಲಾಗಿದೆ.

ಸರ್ಕಾರ ಈಗಾಗಲೇ 2020ರ ಫೆಬ್ರವರಿಯಿಂದ 2020ರ ಮೇ ಅವಧಿಯಲ್ಲಿ ಜಿಎಸ್‌ಟಿಆರ್‌-3ಬಿ ಸಲ್ಲಿಕೆ ಮಾಡಿರುವರರ ವಿಳಂಬ ಶುಲ್ಕವನ್ನು ಮನ್ನಾ ಮಾಡಿದೆ.

3. ರಾಜ್ಯಗಳು ಆರ್ಥಿಕ ಕೊರತೆಯನ್ನು ಎದುರಿಸುತ್ತಿವೆ. ಹೀಗಾಗಿ ಕೋವಿಡ್‌-19ನಿಂದ ರಾಜ್ಯಗಳ ಮೇಲಾಗಿರುವ ಪರಿಣಾಮ ಬಗ್ಗೆ ಸಭೆಯಲ್ಲಿ ಚರ್ಚೆಗೆ ಬರಲಿದೆ.

ಜಿಎಸ್‌ಟಿ ಜಾರಿಯಾದಾಗಿನಿಂದ ರಾಜ್ಯ ಸರ್ಕಾರಗಳಿಗೆ ಆದಾಯದ ನಷ್ಟವಾಗಿದೆ. ರಾಜ್ಯಗಳಿಗೆ ನೀಡಬೇಕಿರುವ ಪಾಲಿನ ಪರಿಹಾರವನ್ನು ನೀಡುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

4. ಜಿಎಸ್‌ಟಿ ಮಂಡಳಿಯಲ್ಲಿ ದರಗಳ ಬದಲಾವಣೆಗಳ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆಸುತ್ತಿಲ್ಲ ಎನ್ನಲಾಗಿದೆ. a) ಆರ್ಥಿಕ ಪುನಶ್ಚೇತನಕ್ಕೆ ತೆರಿಗೆ ದರ ಏರಿಕೆ ಹೊಡೆತ ನೀಡುವ ಸಾಧ್ಯತೆ ಇದೆ. b) ತೆರಿಗೆ ದರ ಕಡಿಮೆ ಮಾಡುವುದು ಸರ್ಕಾರದ ಆದಾಯಕ್ಕೆ ಅಡ್ಡಿಯಾಗಲಿದೆ.

5. ಮಹಾಮಾರಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಗಿರುವ ಪರಿಣಾಮಗಳು ಮತ್ತು ಆದಾಯದ ಕಡಿತವಾಗಿರುವ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ. ನೀರಸ ತೆರಿಗೆ ಸಂಗ್ರಹ ಮತ್ತು ಡೆಡ್‌ ಲೈನ್‌ ಅವಧಿಯನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ ರಾಜ್ಯಗಳಿಗೆ ನೀಡಬೇಕಿದ್ದ ಏಪ್ರಿಲ್‌ ಮತ್ತು ಮೇ ತಿಂಗಳ ಪಾಲನ್ನು ನೀಡುವ ಬಗ್ಗೆ ಚರ್ಚೆ ನಡೆಸುತ್ತಾರೆ ಎನ್ನಲಾಗಿದೆ.

ABOUT THE AUTHOR

...view details