ನವದೆಹಲಿ:ಬಂಗಾರದ ಬೆಲೆ ಮತ್ತೆ ಏರಿಕೆ ಹಾದಿ ಹಿಡಿದಿದೆ. ಬೆಂಗಳೂರಿನಲ್ಲೂ ಬಂಗಾರದ ಬೆಲೆ (Gold Price) ಇಂದೂ ತುಟ್ಟಿಯಾಗಿದೆ. ನಿನ್ನೆ ಕೂಡಾ ಚಿನ್ನದ ಬೆಲೆ ಏರಿಕೆಯಾಗಿತ್ತು. ಗುರುವಾರ 22 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ 47,250 ರೂ. ಆಗಿದ್ದರೆ, ಇಂದು ಅದೇ ದರ 90 ರೂ. ಹೆಚ್ಚಾಗಿ 47,340 ರೂ.ಗೆ ಬಂದು ನಿಂತಿದೆ. 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 48,250 ರೂ. ಇತ್ತು. ಇಂದು 90 ರೂ. ಹೆಚ್ಚಾಗಿ 48,340 ರೂ. ಆಗಿದೆ.
ಬೆಂಗಳೂರಲ್ಲಿ ಇಂತಿದೆ ಗೋಲ್ಡ್ ರೇಟ್:
ಬೆಂಗಳೂರಿನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ (Gold Price) ಇಂದು 50,070 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನ 45,900 ರೂ. ಇದೆ. ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 49 ಸಾವಿರದಿಂದ 50 ಸಾವಿರದ ಆಸುಪಾಸಿನಲ್ಲೇ ಇದೆ.
ಚೆನ್ನೈನಲ್ಲಿ 50,400 ರೂ.ಇದ್ದರೆ, ಮುಂಬೈನಲ್ಲಿ 48,340 ರೂ., ದೆಹಲಿಯಲ್ಲಿ 52,420 ರೂ. ಹಾಗೂ ಕೋಲ್ಕತ್ತಾದಲ್ಲಿ 51,200 ರೂ. ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಶಿಕ್‌ನಲ್ಲೂ ಹೆಚ್ಚೂ ಕಡಿಮೆ 49 ಸಾವಿರದಿಂದ 50 ಸಾವಿರದ ಆಸುಪಾಸಿನಲ್ಲೇ ಇದೆ.
ಬೆಳ್ಳಿ ಬೆಲೆ ಎಷ್ಟು?:
ಬೆಳ್ಳಿ ದರ ಸಹ ಏರಿಕೆ ಹಾದಿ ಹಿಡಿದಿದೆ. (Silver Rate) ಗುರುವಾರ1 ಕೆಜಿ ಬೆಳ್ಳಿಗೆ 64,700 ರೂ. ದರ ಇದ್ದರೆ ಇಂದು ಅದೇ 1,800 ರೂ. ಏರಿಕೆಯಾಗಿ 66,500 ರೂ. ಆಗಿದೆ. ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ ಇಂದು 66,500 ರೂ. ಇದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 70,600 ರೂ. ಆಗಿದೆ. ಇನ್ನು, ಮುಂಬೈ, ದೆಹಲಿ ಹಾಗೂ ಕೋಲ್ಕತ್ತಾದಲ್ಲಿ ಸಹ 66,500 ರೂ. ದರ ಇದೆ.
ಇದನ್ನೂ ಓದಿ:ombudsman schemes: ರಿಟೇಲ್ ಡೈರೆಕ್ಟ್, ಒಂಬುಡ್ಸ್ಮನ್ಸ್ ಯೋಜನೆಗಳಿಗೆ ಇಂದು ಪ್ರಧಾನಿ ಮೋದಿ ಚಾಲನೆ