ನವದೆಹಲಿ:ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಇನ್‌ವಾಯ್ಸ್‌ಗಳನ್ನು ಬಳಸಿಕೊಂಡು ಐಜಿಎಸ್‌ಟಿ ಮರುಪಾವತಿ ಮಾಡಿರುವುದಾಗಿ ವಂಚನೆ ಮಾಡಿದ್ದಕ್ಕಾಗಿ ತೆರಿಗೆ ಅಧಿಕಾರಿಗಳು ಮೂವರನ್ನು ಬಂಧಿಸಿ ಮೂರು ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್ಟಿ ಇಂಟೆಲಿಜೆನ್ಸ್ (ಡಿಜಿಜಿಐ) ಅಧಿಕಾರಿಗಳು ಫಾರ್ಚೂನ್ ಗ್ರಾಫಿಕ್ಸ್ ಲಿಮಿಟೆಡ್, ರೀಮಾ ಪಾಲಿಕೆಮ್ ಪ್ರೈವೇಟ್ ಲಿಮಿಟೆಡ್ ಮತ್ತು ಗಣಪತಿ ಎಂಟರ್‌ಪ್ರೈಸಸ್ ಎಂಬ ಮೂರು ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಸಂಸ್ಥೆಗಳು ಯಾವುದೇ ನೈಜ ಸರಕುಗಳ ಸರಬರಾಜು ಇಲ್ಲದೆ ಇನ್‌ವಾಯ್ಸ್ ನೀಡುವಲ್ಲಿ ತೊಡಗಿಸಿಕೊಂಡಿವೆ ಎಂದು ಹಣಕಾಸು ಸಚಿವಾಲಯ ಹೇಳಿದೆ.