ಕರ್ನಾಟಕ

karnataka

ETV Bharat / business

ಇದು ಮೋದಿ ಸಾಧನೆಯಾ? ನೀರವ್ ಓಡಿಹೋಗಲು ಬಿಟ್ಟವರು ಯಾರು..- ಚೌಕೀದಾರ್ ಗೆ ಪ್ರಿಯಾಂಕಾ ಪ್ರಶ್ನೆ - undefined

ಜಾರಿ ನಿರ್ದೇಶನಾಲಯವು ಮುಂಬೈನ ವಿಶೇಷ ಕೋರ್ಟ್​ ಆದೇಶದ ಮೇರೆಗೆ ನೀರವ್ ಮೋದಿಗೆ ಸೇರಿದ ಬಹುಕೋಟಿ ಮೌಲ್ಯದ ಬ್ರಾಂಡೆಡ್​ನ 11 ಕಾರುಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

Ed

By

Published : Mar 20, 2019, 11:47 PM IST

ಮುಂಬೈ: ಬಹುಕೋಟಿ ಪಿಎನ್​ಬಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿ ಕೊನೆಗೆ ಬಂಧನಕ್ಕೊಳಪಟ್ಟು ಲಂಡನ್​ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ಬೆನ್ನಲ್ಲೇ ಭಾರತದಲ್ಲಿ ಇಡಿ ಮತ್ತೊಂದು ಶಾಕ್​ ನೀಡಿದೆ.

ಜಾರಿ ನಿರ್ದೇಶನಾಲಯವು ಮುಂಬೈನ ವಿಶೇಷ ಕೋರ್ಟ್​ ಆದೇಶದ ಮೇರೆಗೆ ನೀರವ್ ಮೋದಿಗೆ ಸೇರಿದ ಬಹುಕೋಟಿ ಮೌಲ್ಯದ ಬ್ರಾಂಡೆಡ್​ನ 11 ಕಾರುಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ರೋಲ್ಸ್ ರಾಯ್ಸ್, ಪೋರ್ಷೆ, ಮರ್ಸಿಡಿಸ್, ಟೊಯೋಟಾ ಫಾರ್ಚುನರ್ ಸೇರಿದಂತೆ ಇತರೆ ಐಷಾರಾಮಿ ಕಾರುಗಳು ನೀರವ್ ಮೋದಿ ಹೊಂದಿದ್ದರು. ಈಗ ಅವುಗಳನ್ನ ಜಾರಿ ನಿರ್ದೇಶನಾಲಯ ಜಪ್ತಿಮಾಡಿಕೊಂಡಿದೆ.

ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, 'ನೀರವ್ ಮೋದಿಯನ್ನು ಲಂಡನ್​ನಲ್ಲಿ ಬಂಧಿಸಿದ್ದು, ಮೋದಿಯ ಸಾಧನೆಯಾ? ಅವರನ್ನು ಹೋಗಲು ಬಿಟ್ಟವರು ಯಾರು? (ಜಾನೆ ಕಿಸ್ನೆ ದಿಯಾ ಥಾ?)' ಎಂದು ಟೀಕಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details