ಕರ್ನಾಟಕ

karnataka

ETV Bharat / business

ಕೋವಿಡ್‌ ಔಷಧಿ 2ಡಿಜಿ ಮಾರುಕಟ್ಟೆಗೆ ಬಿಡುಗಡೆ - ಡಾ.ರೆಡ್ಡೀಸ್

ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ ಸಂಸ್ಥೆ ಕೋವಿಡ್‌ ಔಷಧಿ 2ಡಿಜಿಯನ್ನು ವಾಣಿಜ್ಯ ಉದ್ದೇಶದಿಂದ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದು, ಪ್ರತಿ ಸ್ಯಾಚೆಟ್‌ನ ಗರಿಷ್ಠ ಬೆಲೆಯನ್ನು 990 ರೂಪಾಯಿ ಎಂದು ಹೇಳಿದೆ.

Dr Reddy's Laboratories announces commercial launch of anti-COVID-19 drug 2-DG
ಕೋವಿಡ್‌ ಔಷಧಿ 2ಡಿಜಿ ವಾಣಿಜ್ಯ ಬಳಕೆಗಾಗಿ ಮಾರುಕಟ್ಟೆಗೆ ಬಿಡುಗಡೆ - ಡಾ.ರೆಡ್ಡೀಸ್

By

Published : Jun 28, 2021, 6:09 PM IST

ಹೈದರಾಬಾದ್‌:ಡಾ. ರೆಡ್ಡೀಸ್‌ ಲ್ಯಾಬೊರೇಟರೀಸ್‌ ಸಂಸ್ಥೆ ಕೋವಿಡ್‌-19 ಔಷಧಿ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ)ಅನ್ನು ವಾಣಿಜ್ಯ ಉದ್ದೇಶದಿಂದ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಪ್ರತಿ ಸ್ಯಾಚೆಟ್‌ನ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) 990 ರೂ.ಗೆ ನಿಗದಿಪಡಿಸಲಾಗಿದ್ದು, ಸರ್ಕಾರಗಳು ಮತ್ತು ದೇಶಾದ್ಯಂತದ ಖಾಸಗಿ ಆಸ್ಪತ್ರೆಗಳಿಗೆ ಈ ಔಷಧಿಯನ್ನು ಪೂರೈಸಲಾಗುವುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ದಿನಗಳಲ್ಲಿ ಕಂಪನಿಯು ಮಹಾನಗರಗಳು ಮತ್ತು 1ನೇ ಶ್ರೇಣಿಯ ನಗರಗಳ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯವಾಗುವಂತೆ ಮಾಡುತ್ತದೆ. ಬಳಿಕ ಸರ್ಕಾರಿ ಸಂಸ್ಥೆಗಳಿಗೆ ನೀಡುವ ಸಬ್ಸಿಡಿ ದರದಲ್ಲಿ ದೇಶದ ಇತರೆ ಭಾಗಗಳಿಗೆ ಔಷಧಿ ಲಭ್ಯತೆಯ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತದೆ ಎಂದು ಹೇಳಿದೆ.

ಡಾ ರೆಡ್ಡೀಸ್ ತಯಾರಿಸಿದ 2-ಡಿಜಿ ಶೇಕಡಾ 99.5 ರಷ್ಟು ಶುದ್ಧತೆಯನ್ನು ಹೊಂದಿದೆ. 2 ಡಿಜಿಟಿಎಂ ಬ್ರಾಂಡ್ ಹೆಸರಿನಲ್ಲಿ ವಾಣಿಜ್ಯಿಕವಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಡಾ.ರೆಡ್ಡೀಸ್‌ ಸಂಸ್ಥೆಯ ಸಹಯೋಗದೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಪ್ರಯೋಗಾಲಯದಲ್ಲಿ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ & ಅಲೈಡ್ ಸೈನ್ಸಸ್ (ಐಎನ್‌ಎಂಎಎಸ್) 2-ಡಿಜಿ, ಮೌಖಿಕ ಔಷಧವನ್ನು ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ: Covid-19 ತಂದಿಟ್ಟ ಬಿಕ್ಕಟ್ಟು: 8 ಅಂಶಗಳ ವಿಶೇಷ ಪ್ಯಾಕೇಜ್​ ಘೋಷಿಸಿದ Sitaraman

ಅರ್ಹ ವೈದ್ಯರ ಮೇಲ್ವಿಚಾರಣೆಯಲ್ಲಿ ಆರೈಕೆಯ ಮಾನದಂಡಗಳ ಆಧಾರದಲ್ಲಿ ಪ್ರಿಸ್ಕ್ರಿಪ್ಷನ್‌ ಇದ್ದವರಿಗೆ ಮಾತ್ರ ಮೆಡಿಕಲ್‌ಗಳಲ್ಲಿ ಔಷಧವನ್ನು ನೀಡಲಾಗುತ್ತದೆ. 2021ರ ಮೇ 1 ರಂದು ಕೋವಿಡ್‌ ಸೋಂಕಿತರ ಚಿಕಿತ್ಸೆಯ ತುರ್ತು ಬಳಕೆಗಾಗಿ ಅನುಮತಿ ನೀಡಲಾಗಿತ್ತು.

ಡಿಆರ್‌ಡಿಒ ಅಧ್ಯಕ್ಷ ಡಾ. ಜಿ.ಸತೀಶ್ ರೆಡ್ಡಿ, ದೀರ್ಘ ಕಾಲದ ಉದ್ಯಮದ ಪಾಲುದಾರ ಹೈದರಾಬಾದ್‌ನ ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ ಅವರ ಸಹಭಾಗಿತ್ವದಲ್ಲಿ ಕೋವಿಡ್‌ ರೋಗಿಗಳಿಗೆ ಈ ಔಷಧಿಯ ಪರಿಣಾಮಕಾರಿ ಬಗ್ಗೆ ಪರೀಕ್ಷೆ ನಡೆಸಲಾಗಿದೆ. ಕೋವಿಡ್‌ ವಿರುದ್ಧದ ಹೋರಾಟಕ್ಕೆ ರೆಡ್ಡೀಸ್‌ ಸಂಸ್ಥೆ ಕೈಜೋಡಿಸಿರುವುದು ಸಂತಸವಾಗಿದೆ ಎಂದು ಹೇಳಿದ್ದಾರೆ.

ಡಾ. ರೆಡ್ಡೀಸ್‌ ಸಂಸ್ಥೆಯ ಅಧ್ಯಕ್ಷ ಸತೀಶ್ ರೆಡ್ಡಿ, ಕೋವಿಡ್‌ ವಿರುದ್ಧದ ಹೋರಾಟಕ್ಕೆ ವ್ಯಾಕ್ಸಿನ್‌ಗಳ ಜೊತೆಗೆ ಈ ಔಷಧ ಕೂಡ ಸಹಕಾರಿಯಾಗಲಿದೆ. ಡಿಆರ್‌ಡಿಒ ಜೊತೆಗೂಡಿ 2ಡಿಜಿ ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ABOUT THE AUTHOR

...view details