ಕರ್ನಾಟಕ

karnataka

ETV Bharat / business

ಇಂದಿನಿಂದ ದೆಹಲಿಯಲ್ಲಿ ಡೀಸೆಲ್ ಬೆಲೆ ಏರಿಕೆಯ ನಾಗಾಲೋಟಕ್ಕೆ ಬ್ರೇಕ್​..

ಡೀಸೆಲ್​​​​ ಮೇಲಿನ ವ್ಯಾಟ್​ ಅನ್ನು ಶೇಕಡಾ 30 ರಿಂದ ಶೇಕಡಾ 16ಕ್ಕೆ ಇಳಿಕೆ ಮಾಡಿ ದೆಹಲಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಲೀಟರ್​ಗೆ‌ 81.94 ರೂ. ಇದ್ದ ಡೀಸೆಲ್​ ಬೆಲೆ ಇಂದು 73.56 ರೂ.ಗೆ ಇಳಿಕೆಯಾಗಿದೆ.

Diesel run ends in Delhi
ಡೀಸೆಲ್ ಬೆಲೆ

By

Published : Jul 31, 2020, 4:42 PM IST

ನವದೆಹಲಿ: ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 8.38 ರೂ.ಗಳಷ್ಟು ಕುಸಿದಿದ್ದರಿಂದ ದೆಹಲಿಯ ಗ್ರಾಹಕರು ಅಂತಿಮವಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಇದೀಗ ಒಂದು ತಿಂಗಳ ಬಳಿಕ ಮೊದಲಿನಂತೆ ಪೆಟ್ರೋಲ್​ಗಿಂತ ಡೀಸೆಲ್ ದರ ಕಡಿಮೆಯಾಗಿದೆ.

ಪೆಟ್ರೋಲ್‌ಗಿಂತ ಡೀಸೆಲ್ ಬೆಲೆ ಹೆಚ್ಚಿರುವ ದೇಶದ ಏಕೈಕ ಪ್ರಮುಖ ನಗರ ದೆಹಲಿಯಾಗಿತ್ತು. ಡೀಸೆಲ್​​​​ ಮೇಲಿನ ವ್ಯಾಟ್​ ಅನ್ನು ಶೇಕಡಾ 30 ರಿಂದ ಶೇಕಡಾ 16ಕ್ಕೆ ಇಳಿಕೆ ಮಾಡಿ ದೆಹಲಿ ಸರ್ಕಾರ ಗುರುವಾರ ಆದೇಶ ಹೊರಡಿಸಿತ್ತು. ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಲೀಟರ್​ಗೆ‌ 81.94 ರೂ. ಇದ್ದ ಡೀಸೆಲ್​ ಬೆಲೆ ಇಂದು 73.56 ರೂ. ಇಳಿಕೆಯಾಗಿದೆ. ಜೂನ್ 29 ರಿಂದಲೂ ಪೆಟ್ರೋಲ್ ದರ 80.43 ರೂ. ಇದೆ.

ದೆಹಲಿ ಹೊರತುಪಡಿಸಿ ದೇಶದ ಇತರ ಮೆಟ್ರೋ ನಗರಗಳಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. (ಲೀಟರ್​ ಬೆಲೆ -ರೂಪಾಯಿಗಳಲ್ಲಿ)

ನಗರ ಪೆಟ್ರೋಲ್ ಡೀಸೆಲ್​
ದೆಹಲಿ 80.43 73.56
ಮುಂಬೈ 87.19 80.11
ಕೋಲ್ಕತ್ತಾ 82.10 77.04
ಬೆಂಗಳೂರು 83.04 77.88
ಚೆನ್ನೈ 83.63 78.87

ABOUT THE AUTHOR

...view details