ಕರ್ನಾಟಕ

karnataka

ETV Bharat / business

ಕೊರೊನಾ ಬಳಿಕ ಹೆಚ್ಚಿದ ಸೈಬರ್‌ ದಾಳಿ ಹಾವಳಿ.. ಚೆನ್ನೈ, ಬೆಂಗಳೂರು ವಂಚಕರ ಹಾಟ್‌ ಫೇವರೆಟ್

ಸೈಬರ್ ಚೋರರು ಉದ್ಯಮಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಸಹ ಗುರಿಯಾಗಿಸಿಕೊಂಡಿದ್ದಾರೆ. 2020ರ ಜನವರಿ ಮತ್ತು ಮಾರ್ಚ್‌ನಲ್ಲಿ ಶೇ 42ರಷ್ಟು ಸೈಬರ್ ದಾಳಿಯ ಮೂಲಕ ಚೆನ್ನೈ ಅಗ್ರಸ್ಥಾನದಲ್ಲಿದೆ. ಈ ಬಳಿಕ ಬೆಂಗಳೂರು ಶೇ.38ರಷ್ಟು ದಾಳಿಯೊಂದಿಗೆ 2ನೇ ಸ್ಥಾನದಲ್ಲಿದೆ..

Cyber attack
ಸೈಬರ್‌ ದಾಳಿ

By

Published : Jun 24, 2020, 10:16 PM IST

ನವದೆಹಲಿ :ಐಟಿ ಉದ್ಯಮಕ್ಕೆ ಆತಂಕಕಾರಿಯಾದ ಸೈಬರ್ ದಾಳಿಯ ಬಗ್ಗೆ ಸೈಬರ್​ ತಜ್ಞರು ಎಚ್ಚರಿಕೆಯ ವರದಿಯೊಂದನ್ನು ಬಹಿರಂಗಪಡಿಸಿದ್ದಾರೆ.

ಕೋವಿಡ್​-19 ಸಾಂಕ್ರಾಮಿಕ ರೋಗ ಹಬ್ಬಿದ ಇತ್ತೀಚಿನ ತಿಂಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ದಕ್ಷಿಣ ಭಾರತದ ಚೆನ್ನೈ ಮತ್ತು ಬೆಂಗಳೂರು ನಗರಗಳನ್ನು ಗುರಿಯಾಗಿಸಿ ಸೈಬರ್​ ಚೋರರು ಅಟ್ಯಾಕ್ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆಈಟಿವಿ ಭಾರತಜತೆ ಮಾತನಾಡಿದ ದೆಹಲಿ ಮೂಲದ ಸೈಬರ್ ತಜ್ಞ ಮುಖೇಶ್ ಚೌಧರಿ ಅವರು, ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸೈಬರ್ ಅಪರಾಧಿಗಳು ತಮ್ಮ ದಾಳಿಯ ವೈಖರಿ ಬದಲಾಯಿಸಿದ್ದಾರೆ ಎಂದರು.

ಸಾಂಕ್ರಾಮಿಕ ರೋಗ ಮತ್ತು ಲಾಕ್​ಡೌನ್​ ಕಾರಣದಿಂದಾಗಿ ಇಂಟರ್ನೆಟ್​ ಬಳಕೆಯ ಪ್ರಮಾಣ ಹೆಚ್ಚಾಗಿದೆ. ಸೈಬರ್ ವಂಚಕರು ಇದನ್ನೇ ಅಸ್ತ್ರವಾಗಿ ಮಾಡಿಕೊಂಡು ಬಳಕೆದಾರರಿಗೆ ನಾನಾ ಶೈಲಿಯಲ್ಲಿ ಆಮಿಷವೊಡ್ಡುವ ಸಂದೇಶ, ಲಿಂಕ್ ಕಳುಹಿಸುತ್ತಿದ್ದಾರೆ​. ಈಗಿನ ವ್ಯವಸ್ಥೆಯನ್ನು ತಮ್ಮ ದುಷ್ಕೃತ್ಯಗಳಿಗೆ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಮದ್ಯ ಮಾರಾಟ, ಕೋವಿಡ್​ -19 ಆರೈಕೆ ಮತ್ತು ಇತರೆ ನಕಲಿ ಆ್ಯಪ್‌ಗಳನ್ನು ಹಬ್ಬಿಸುತ್ತಿದ್ದಾರೆ ಎಂದರು.

ಸೈಬರ್ ಚೋರರು ಉದ್ಯಮಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಸಹ ಗುರಿಯಾಗಿಸಿಕೊಂಡಿದ್ದಾರೆ. 2020ರ ಜನವರಿ ಮತ್ತು ಮಾರ್ಚ್‌ನಲ್ಲಿ ಶೇ.42ರಷ್ಟು ಸೈಬರ್ ದಾಳಿಯ ಮೂಲಕ ಚೆನ್ನೈ ಅಗ್ರಸ್ಥಾನದಲ್ಲಿದೆ. ಈ ಬಳಿಕ ಬೆಂಗಳೂರು ಶೇ.38ರಷ್ಟು ದಾಳಿಯೊಂದಿಗೆ 2ನೇ ಸ್ಥಾನದಲ್ಲಿದೆ. ಹೈದರಾಬಾದ್ ಮತ್ತು ಕೋಲ್ಕತಾ ಶೇ.35ರಷ್ಟು ದಾಳಿಗೆ ಒಳಗಾಗಿವೆ ಎಂದು ಖಾಸಗಿ ಸೈಬರ್ ಭದ್ರತಾ ಸಂಸ್ಥೆ ಕೆ7 ಕಂಪ್ಯೂಟಿಂಗ್ ಬಿಡುಗಡೆ ಮಾಡಿದ ವರದಿಯಲ್ಲಿದೆ.

ಸೈಬರ್ ದಾಳಿಕೋರರು ಬಹುತೇಕ ಮೈಕ್ರೋಸಾಫ್ಟ್‌ನ ವಿಂಡೋಸ್ ಎಕ್ಸ್‌ಪಿ ಮತ್ತು ವಿಂಡೋಸ್ 7 ಓಎಸ್‌ನ ಗುರಿಯಾಗಿಸಿಕೊಂಡಿದ್ದಾರೆ. ಮೈಕ್ರೋಸಾಫ್ಟ್ ಈ ಎರಡು ಓಸ್‌ಗಳ ನವೀಕರಣ ಮತ್ತು ಪ್ಯಾಚ್‌ ನಿಲ್ಲಿಸಿದ್ದನ್ನು ಗಮನಿಸಿಯೇ ಇವುಗಳನ್ನು ಟಾರ್ಗೆಟ್​ ಮಾಡಿದ್ದಾರೆ ಎಂದು ಕೆ 7 ಕಂಪ್ಯೂಟಿಂಗ್ ಸಿಇಒ ಕೇಶವರಧನ್ ಹೇಳಿದರು. ಕರ್ವ್‌ಬಾಲ್, ರಿಮೋಟ್ ಕೋಡ್ ಎಕ್ಸಿಕ್ಯೂಷನ್, ಕೋವಿಡ್​ -19 ಟ್ರೆಂಡ್‌ಗಳನ್ನು ಆಧರಿಸಿದ ಫಿಶಿಂಗ್ ದಾಳಿಗಳು ಮತ್ತು ಸೇವೆ ನಿರಾಕರಣೆಯಂತಹ (ಡಾಸ್) ಸೈಬರ್ ಅಪರಾಧಿಗಳು ಸಾಮಾನ್ಯ ದಾಳಿಗಳಾಗಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಸಂಕೀರ್ಣ ವೈರಸ್‌ಗಳಾದ ಟ್ರೋಜನ್‌ ಮತ್ತು ರ್ಯಾನ್​ ಸಮ್‌ವೇರ್‌ ವೈರಸ್​ಗೆ ಉದ್ಯಮ ಸಂಸ್ಥೆಗಳು ಈಡಾಗುತ್ತಿವೆ. ನಕಲಿ ಆ್ಯಪ್​, ಕೋವಿಡ್​-19 ಅಪ್ಲಿಕೇಷನ್‌ಗಳು ಮತ್ತು ಇತರೆ ಆ್ಯಪ್​ ಡೌನ್‌ಲೋಡ್ ಮಾಡುವಾಗ ದಾಳಿ ನಡೆಯುವ ಸಂಭವವಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಚೆನ್ನೈ ಮತ್ತು ಬೆಂಗಳೂರು ದೇಶದ ಪ್ರಮುಖ ಐಟಿ ಕೇಂದ್ರಗಳಾಗಿರುವುದರಿಂದ ಸೈಬರ್ ವಂಚಕರು ಸಹಜವಾಗಿ ಈ ನಗರಗಳತ್ತ ದೃಷ್ಟಿ ನೆಟ್ಟಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದರಬೇಕು ಎನ್ನುತ್ತಾರೆ ಮುಖೇಶ್ ಚೌಧರಿ.

ABOUT THE AUTHOR

...view details