ಕರ್ನಾಟಕ

karnataka

ETV Bharat / business

ಕೊರೊನಾ ಅಟ್ಟಹಾಸದ ಮಧ್ಯೆ ಭಾರತೀಯರು ತಾಯ್ನಾಡಿಗೆ ರವಾನಿಸುವ ಹಣ ಏರಿಕೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಮಾಹಿತಿಯ ಪ್ರಕಾರ, ಏಪ್ರಿಲ್ 17ಕ್ಕೆ ಕೊನೆಗೊಂಡ ವರದಿ ವಾರದಲ್ಲಿ ಒಟ್ಟಾರೆ ಮೀಸಲು ವಿದೇಶಿ ಕರೆನ್ಸಿ ಆಸ್ತಿ (ಎಫ್‌ಸಿಎ) 1.55 ಬಿಲಿಯನ್ ಡಾಲರ್​ ಏರಿಕೆಯಾಗಿದೆ. ಅದು 441.88 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

foreign exchange
ವಿದೇಶಿ ವಿನಿಮಯ

By

Published : Apr 25, 2020, 4:53 PM IST

ನವದೆಹಲಿ: ವಿದೇಶಿ ಕರೆನ್ಸಿ ಆಸ್ತಿಗಳ ಹೆಚ್ಚಳದಿಂದಾಗಿ ದೇಶದ ವಿದೇಶಿ ವಿನಿಮಯ ಸಂಗ್ರಹವು ಏಪ್ರಿಲ್ 17ರಿಂದ ವಾರದಲ್ಲಿ 3.09 ಬಿಲಿಯನ್ ಅಮೆರಿಕನ್ ಡಾಲರ್​ನಿಂದ 479.57 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಮಾಹಿತಿಯ ಪ್ರಕಾರ, ಏಪ್ರಿಲ್ 17ಕ್ಕೆ ಕೊನೆಗೊಂಡ ವರದಿ ವಾರದಲ್ಲಿ ಒಟ್ಟಾರೆ ಮೀಸಲು ವಿದೇಶಿ ಕರೆನ್ಸಿ ಆಸ್ತಿ (ಎಫ್‌ಸಿಎ) 1.55 ಬಿಲಿಯನ್ ಡಾಲರ್​ ಏರಿಕೆಯಾಗಿದೆ. ಅದು 441.88 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ವಾರದಲ್ಲಿ ಚಿನ್ನದ ನಿಕ್ಷೇಪವು 1.54 ಬಿಲಿಯನ್ ಡಾಲರ್ 32.68 ಬಿಲಿಯನ್ ಡಾಲರ್​ಗಳಿಗೆ ಏರಿದೆ ಎಂದು ಅಂಕಿ ಅಂಶಗಳು ತೋರಿಸಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ಐಎಂಎಫ್ ವಿಶೇಷ ಮೀಸಲು ರೈಟ್ಸ್​ ನಿಧಿ 3 ಮಿಲಿಯನ್ ಡಾಲರ್​ಗಳಿಂದ 1.43 ಬಿಲಿಯನ್ ಡಾಲರ್​ಗೆ ಹೆಚ್ಚಳವಾಗಿದೆ. ಐಎಂಎಫ್‌ಯೊಂದಿಗಿನ ದೇಶದ ಮೀಸಲು ಫಂಡ್​ 3.58 ಬಿಲಿಯನ್ ಡಾಲರ್‌ಗಳಲ್ಲಿ ಸ್ಥಿರವಾಗಿದೆ.

ABOUT THE AUTHOR

...view details