ನವದೆಹಲಿ:ಕೆಫೆ ಕಾಫಿ ಡೇ ಮೂಲಕ ಬೃಹತ್ ಉದ್ಯಮವನ್ನು ಕಟ್ಟಿ ಬೆಳೆಸಿದ್ದ ಕರ್ನಾಟಕದ ಯಶಸ್ವಿ ಉದ್ಯಮಿ ವಿ.ಜಿ.ಸಿದ್ಧಾರ್ಥ ಸಾವನ್ನಪ್ಪಿದ ಪರಿಣಾಮ ಇವರ ಒಡೆತನದ ಕಾಫಿ ಡೇ ಷೇರು ವ್ಯವಹಾರ ಎರಡನೇ ದಿನದ ಆರಂಭದಲ್ಲಿ ದೊಡ್ಡ ಕುಸಿತ ಅನುಭವಿಸಿದೆ.
ಸಿದ್ಧಾರ್ಥ ನಾಪತ್ತೆಯಾದ ಮರುದಿನ(ಜುಲೈ 30)ರ ವಹಿವಾಟಿನಲ್ಲಿ ಕಾಫಿ ಡೇ ಷೇರುಗಳು ಶೇ.20ರಷ್ಟು ಕುಸಿತ ಕಂಡಿತ್ತು. ಇಂದು ಸಿದ್ಧಾರ್ಥ ಮೃತದೇಹ ಪತ್ತೆಯಾದ ಬೆನ್ನಲ್ಲೇ ಇಂದಿನ ವಹಿವಾಟು ಸಹ ನೀರಸ ಆರಂಭ ಪಡೆದಿದೆ.