ಕರ್ನಾಟಕ

karnataka

ETV Bharat / business

ಇದೇ ದಿನದಂದು ಆ್ಯಂಡ್ರಾಯ್ಡ್ 10 ರಿಲೀಸ್..? ಮೊದಲ ಬಳಕೆದಾರರು ಇವರೇ..! - ಆ್ಯಂಡ್ರಾಯ್ಡ್ ಆವೃತ್ತಿ

ಆ್ಯಂಡ್ರಾಯ್ಡ್ 10 ಹೆಸರಿನಲ್ಲಿ ಸೆಪ್ಟೆಂಬರ್​ 3ರಂದು ನೂತನ ಆವೃತ್ತಿ ಬಿಡುಗಡೆಯಾಗಲಿದೆ ಎಂದು ಸುದ್ದಿ ಹೊರಬಿದ್ದಿದ್ದು ಆದರೆ, ಗೂಗಲ್​​ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.

ಆ್ಯಂಡ್ರಾಯ್ಡ್ 10

By

Published : Aug 27, 2019, 9:55 AM IST

ನವದೆಹಲಿ:ಗೂಗಲ್​ ತನ್ನ ಆ್ಯಂಡ್ರಾಯ್ಡ್ ಆವೃತ್ತಿಗಳಿಗೆ ಸಿಹಿತಿಂಡಿ ಹೆಸರನ್ನಿಡುವ ಸಂಪ್ರದಾಯಕ್ಕೆ ಕೊನೆ ಹಾಡಿದ್ದು,ಈ ನಿರ್ಧಾರದ ಬಳಿಕ ಬರುತ್ತಿರುವ ಆವೃತ್ತಿಯ ಬಿಡುಗಡೆ ದಿನಾಂಕ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಆ್ಯಂಡ್ರಾಯ್ಡ್ 10 ಹೆಸರಿನಲ್ಲಿ ಸೆಪ್ಟೆಂಬರ್​ 3ರಂದು ನೂತನ ಆವೃತ್ತಿ ಬಿಡುಗಡೆಯಾಗಲಿದೆ ಎಂದು ಸುದ್ದಿ ಹೊರಬಿದ್ದಿದ್ದು ಆದರೆ, ಗೂಗಲ್​​ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.

ಆ್ಯಂಡ್ರಾಯ್ಡ್ ವರ್ಷನ್​ಗೆ ಇನ್ಮುಂದೆ ಇರಲ್ಲ ತಿಂಡಿಗಳ ಹೆಸರು..! ಹಾಗಿದ್ದರೆ ಮುಂದೇನು...?

ಸೆಪ್ಟೆಂಬರ್ 3ರಂದು ರಿಲೀಸ್ ಆಗಲಿದೆ ಎನ್ನುವ ಸುದ್ದಿಯ ಜೊತೆಗೆ ಈ ಆ್ಯಂಡ್ರಾಯ್ಡ್ ವರ್ಷನ್​ ಯಾವ ಮೊಬೈಲ್​ ಬಳಕೆದಾರರಿಗೆ ಪ್ರಥಮವಾಗಿ ಲಭ್ಯವಾಗಲಿದೆ ಎನ್ನುವುದೂ ತಿಳಿದುಬಂದಿದೆ.

ಮೂಲಗಳ ಮಾಹಿತಿ ಪ್ರಕಾರ ಗೂಗಲ್​ ಪಿಕ್ಸೆಲ್​​​ ಬಳಕೆದಾರರು ಆ್ಯಂಡ್ರಾಯ್ಡ್ 10 ಆವೃತ್ತಿಯ ಮೊದಲ ಬಳಕೆದಾರರಾಗಲಿದ್ದಾರೆ ಎನ್ನಲಾಗಿದೆ.

ಜಾಗತಿಕವಾಗಿ ತಿಂಡಿಗಳ ಹೆಸರು ಅರ್ಥವಾಗುತ್ತಿಲ್ಲ ಎನ್ನುವ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಆ್ಯಂಡ್ರಾಯ್ಡ್ ತನ್ನ ಸಂಪ್ರದಾಯಕ್ಕೆ ಕೊನೆ ಹಾಡಿತ್ತು. ಹೀಗಾಗಿ ಮುಂದಿನ ಆವೃತ್ತಿಯಗೆ ಆ್ಯಂಡ್ರಾಯ್ಡ್ 10 ಎಂದು ಹೆಸರಿಸಿದೆ.

ABOUT THE AUTHOR

...view details