ನವದೆಹಲಿ: ಭಾರತೀಯ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿ ಆರು ದಿನಗಳ ಕಾಲ ರಿಯಾಯ್ತಿ ಸೇಲ್ ನಡೆಸಿದ್ದ ಅಮೇಜಾನ್ ಹಾಗೂ ಫ್ಲಿಪ್ಕಾರ್ಟ್ ಒಟ್ಟಾರೆ ಎಷ್ಟು ಕೋಟಿ ವ್ಯವಹಾರ ನಡೆಸಿವೆ ಎನ್ನುವ ಅಂಕ-ಅಂಶ ಬಹಿರಂಗವಾಗಿದೆ.
ಸೆ.28ರಿಂದ ಅ.4ರವರೆಗೆ ಅಮೇಜಾನ್(ಗ್ರೇಟ್ ಇಂಡಿಯನ್ ಸೇಲ್)ಹಾಗೂ ಫ್ಲಿಪ್ಕಾರ್ಟ್(ಬಿಗ್ ಬಿಲಿಯನ್ ಡೇ ಸೇಲ್)ಹಮ್ಮಿಕೊಂಡಿತ್ತು. ಆರು ದಿನದ ಈ ಮಹಾಸೇಲ್ನಲ್ಲಿ ಎರಡೂ ಕಂಪನಿಗಳು ಒಟ್ಟಾರೆ ಬರೋಬ್ಬರಿ ₹19,000 ಕೋಟಿ ಮೌಲ್ಯದಷ್ಟು ಸರಕುಗಳ ವ್ಯವಹಾರ ನಡೆಸಿದೆ ಎನ್ನುವುದು ತಿಳಿದು ಬಂದಿದೆ.
ಅಮೇಜಾನ್ Vs ಫ್ಲಿಪ್ಕಾರ್ಟ್ ದರ ಸಮರ.. ಫೆಸ್ಟಿವ್ ಸೇಲ್ನಲ್ಲಿ ಗೆದ್ದಿದ್ದು ಯಾರು..?
ಎರಡು ದಿಗ್ಗಜ ಕಂಪನಿಗಳು ಒಂದೇ ಅವಧಿಯಲ್ಲಿ ಆಯೋಜಿಸಿದ್ದ ಈ ಸೇಲ್ನಲ್ಲಿ ಅಮೇಜಾನ್ ತನ್ನ ಸಮೀಪದ ಪ್ರತಿಸ್ಪರ್ಧಿ ಫ್ಲಿಪ್ಕಾರ್ಟ್ಗಿಂತ ಹೆಚ್ಚಿನ ವ್ಯವಹಾರ ನಡೆಸಿತ್ತು ಎನ್ನುವುದು ಕೆಲ ದಿನಗಳ ಹಿಂದೆ ಬಹಿರಂಗಗೊಂಡಿತ್ತು.
ಇದೇ ವಾರಾಂತ್ಯದಲ್ಲಿ ಮತ್ತೆ ಮೆಗಾಸೇಲ್:
ಅ.13ರಿಂದ 17ರವರೆಗೆ ಅಮೆಜಾನ್ ಮತ್ತೊಮ್ಮೆ 'ಗ್ರೇಟ್ ಇಂಡಿಯನ್ ಸೆಲಬ್ರೇಷನ್ ಸ್ಪೆಷಲ್ ಸೇಲ್' ಹಮ್ಮಿಕೊಂಡಿದ್ದು, ಗ್ರಾಹಕರು ವಿಶೇಷ ಆಫರ್ಗಳನ್ನು ಪಡೆಯಬಹುದಾಗಿದೆ. ಅಮೇಜಾನ್ ಪ್ರೈಮ್ ಗ್ರಾಹಕರು ಉಳಿದ ಗ್ರಾಹಕರಿಗಿಂತ ಮುಂಚಿತವಾಗಿ ಅಂದರೆ ಅ.12ರ ಮಧ್ಯಾಹ್ನ 12ರಿಂದ ಆಫರ್ ಪಡೆಯಬಹುದಾಗಿದೆ. ಅ.13ರಿಂದ ಆರಂಭವಾಗಲಿರುವ ವಿಶೇಷ ಸೇಲ್ನಲ್ಲಿ ಮೊಬೈಲ್ ಫೋನ್ಗಳಿಗೆ ಶೇ.40ರಷ್ಟು ಕಡಿತವಿರಲಿದೆ ಎಂದು ಅಮೇಜಾನ್ ಹೇಳಿದೆ.
ಫ್ಲಿಪ್ಕಾರ್ಟ್ ದೀಪಾವಳಿ ಸೇಲ್ ಘೋಷಣೆ ಮಾಡಿದ್ದು, ಅ.12ರಿಂದ 16ರವರೆಗೆ ನಡೆಯಲಿದೆ. ಇತ್ತೀಚೆಗೆ ಮುಕ್ತಾಯವಾದ ಸೇಲ್ನಲ್ಲಿ ಕೊಂಚ ಹಿನ್ನಡೆ ಕಂಡಿರುವ ಫ್ಲಿಪ್ಕಾರ್ಟ್ ಈ ಬಾರಿ ಅಮೇಜಾನ್ ಹಿಂದಿಕ್ಕಲು ಒಂದು ದಿನ ಮುಂಚಿತವಾಗಿಯೇ ಮೆಗಾಸೇಲ್ ಆರಂಭಿಸಿದೆ.