ಮುಂಬೈ :ಕಳೆದ 12 ತಿಂಗಳ ಅವಧಿಯಲ್ಲಿ ಸೈಬರ್ ದಾಳಿಗೆ ತಾವು ಬಲಿಯಾಗಿದ್ದೇವೆ ಎಂದು ಸುಮಾರು 52 ಪ್ರತಿಶತದಷ್ಟು ಭಾರತೀಯ ಸಂಸ್ಥೆಗಳು ಒಪ್ಪಿಕೊಂಡಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
71 ಪ್ರತಿಶತದಷ್ಟು ಸಂಸ್ಥೆಗಳು ಇದೊಂದು ಗಂಭೀರ ದಾಳಿ ಎಂದು ಒಪ್ಪಿವೆ. ಶೇ.65ರಷ್ಟು ಜನ ಇದನ್ನು ಪರಿಹರಿಸಲು ಒಂದು ವಾರಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ ಎಂದು ಜಾಗತಿಕ ಸೈಬರ್ ಸೆಕ್ಯುರಿಟಿ ಸಂಸ್ಥೆ ಸೋಫೋಸ್ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಏಷ್ಯಾ ಪೆಸಿಫಿಕ್ ಮತ್ತು ಜಪಾನ್‌ನಾದ್ಯಂತ 900 ವ್ಯವಹಾರ ನಿರ್ಧಾರ ತೆಗೆದುಕೊಳ್ಳುವ ಅಧ್ಯಯನವು, ಕೋವಿಡ್-19 ವರ್ಷವು ಡಿಜಿಟಲೀಕರಣದ ವೇಗ ಸೂಚಿಸುತ್ತದೆ. ಇದೇ ಅವಧಿಯಲ್ಲಿ ಸೈಬರ್ ಸುರಕ್ಷತೆಯನ್ನು ಸಹ ಅಷ್ಟೇ ವೇಗವಾಗಿ ಸುಧಾರಿಸುವುದು ಅಗತ್ಯವಿದೆ. ಭದ್ರತಾ ಸಮಸ್ಯೆಗಳು ಸಹ ಕಾಣಿಸುತ್ತಿವೆ ಎಂದು ತಿಳಿಸಿದೆ.
ನಿರಂತರವಾಗಿ ಗಂಭೀರ ದಾಳಿಗಳು ಹೆಚ್ಚಾಗುತ್ತಿದ್ದರೂ ಸೈಬರ್ ಸೆಕ್ಯುರಿಟಿಗೆ ವಿನಿಯೋಗಿಸುವ ಬಜೆಟ್ 2019 ಮತ್ತು 2021ರ ನಡುವಿನ ಆದಾಯದ ಶೇಕಡಾವಾರು ಪ್ರಮಾಣದಲ್ಲಿ ಬದಲಾಗದೆ ಉಳಿದಿವೆ. ಸೈಬರ್ ಸುರಕ್ಷತೆಗೆ ಖರ್ಚು ಮಾಡಿದ ತಂತ್ರಜ್ಞಾನದ ಬಜೆಟ್ ಸರಾಸರಿ ಪ್ರಮಾಣವು ಇಂದಿನ ಶೇ.9ರಿಂದ ಮುಂದಿನ 24 ತಿಂಗಳಲ್ಲಿ 10 ಪ್ರತಿಶತಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಿದೆ.
ವಾಸ್ತವದಲ್ಲಿ ಸೈಬರ್ ದಾಳಿಯ ಉಲ್ಲಂಘನೆ ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲದ. ಒಂದು ಸಂಸ್ಥೆಯೊಳಗೆ ವಿವಿಧ ದೋಷಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮತ್ತು ಸೈಬರ್ ಟಾಕ್‌ಗಳನ್ನು ಪ್ರಾರಂಭಿಸುವಂತಹ ಹಲವು ಬೆದರಿಕೆಗಳು ಯಾವಾಗಲೂ ಇರುತ್ತವೆ ಎಂದು ಸೋಫೋಸ್ ಇಂಡಿಯಾ ಮತ್ತು ಸಾರ್ಕ್‌ನ ಮಾರಾಟ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಶರ್ಮಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ಬೆದರಿಕೆಗಳನ್ನು ತಡೆಯುವ ಏಕೈಕ ಮಾರ್ಗವೆಂದರೆ ಅವುಗಳನ್ನು ಸಕ್ರಿಯವಾಗಿ ಹಿಮ್ಮೆಟ್ಟಿಸುವುದು. ದಾಳಿಗಳನ್ನು ತಟಸ್ಥಗೊಳಿಸುವುದು. ಸೈಬರ್ ಅಟ್ಯಾಕ್‌ಗಳು ಹೆಚ್ಚುತ್ತಲೇ ಇರುವುದರಿಂದ ಮುಂದಿನ 24 ತಿಂಗಳಲ್ಲಿ ಮಾಲ್‌ವೇರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್/ಮೆಷಿನ್ ಲರ್ನಿಂಗ್ ಚಾಲಿತ ದಾಳಿಗಳು ಸೈಬರ್ ಸುರಕ್ಷತೆಗೆ ಅತ್ಯಂತ ಗಂಭೀರ ಬೆದರಿಕೆ ಎಂದು ವರದಿ ಎಚ್ಚರಿಸಿದೆ.