ಮುಂಬೈ: ಮೈದಾನದಲ್ಲಿ ಸಿಕ್ಸರ್ಗಳ ಮೂಲಕ ಅಬ್ಬರಿಸಿದ್ದ ಹಾಗೂ ಎರಡೂ ಮಾದರಿಯ ವಿಶ್ವಕಪ್ನ ರಿಯಲ್ ಹೀರೋ ಟೀಮ್ ಇಂಡಿಯಾದ ಆಲ್ರೌಂಡರ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.
ದಕ್ಷಿಣ ಮುಂಬೈನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯುವಿ ನಿವೃತ್ತಿ ಘೋಷಣೆ ಮಾಡಿದ್ದು ಈ ಮೂಲಕ ಸಿಕ್ಸರ್ಗಳ ಸರದಾರ 22 ಯಾರ್ಡ್ಗಳ ನಂಟನ್ನು ಕೊನೆಗೊಳಿಸಿದ್ದಾರೆ.
ಕಳೆದ 25 ವರ್ಷದಿಂದ ಕ್ರಿಕೆಟ್ ಆಡುತ್ತಾ ಬಂದಿದ್ದೇನೆ. 22 ಯಾರ್ಡ್ನಲ್ಲಿ ಸುಮಾರು 17 ವರ್ಷದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದೇನೆ. ಸದ್ಯ ಜೀವನದಲ್ಲಿ ಮುಂದುವರೆಯಲು ನಿರ್ಧರಿಸಿದ್ದೇನೆ. ಈ ಆಟ ನನ್ನಲ್ಲಿ ಹೋರಾಟವನ್ನು ಕಲಿಸಿದೆ, ಸೋಲನ್ನೂ ಕಲಿಸಿದೆ ಹಾಗೂ ಮೇಲೆದ್ದು ಮುಂದುವರೆಯುವ ಛಲವನ್ನೂ ಇದೇ ಆಟದಿಂದ ಕಲಿತಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಯುವರಾಜ್ ಭಾವನಾತ್ಮಕವಾಗಿ ಹೇಳಿದ್ದಾರೆ.
37 ವರ್ಷದ ಯುವರಾಜ್ ಸಿಂಗ್ ಭಾರತದ ಪರವಾಗಿ 40 ಟೆಸ್ಟ್, 304 ಏಕದಿನ ಹಾಗೂ 58 ಟಿ-20 ಪಂದ್ಯಗಳನ್ನಾಡಿದ್ದಾರೆ. 2007 ಟಿ-20 ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು.