ಕರ್ನಾಟಕ

karnataka

ETV Bharat / briefs

ಕೆಆರ್‌ಎಸ್‌ ಹಿನ್ನೀರಿನಲ್ಲಿ ಯುವಕ -ಯುವತಿಯರ ಮೋಜು ಮಸ್ತಿ: ರೊಚ್ಚಿಗೆದ್ದ ಸ್ಥಳೀಯರು - Restriction on KRS backwater

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಹಿನ್ನೀರಿನಲ್ಲಿ ಮೈಸೂರು ಮೂಲದ ಯುವಕ - ಯುವತಿಯರು ಮೋಜು-ಮಸ್ತಿ ಮಾಡಲು ಬರುತ್ತಿದ್ದಾರೆ. ಇದು ಸ್ಥಳೀಯರಲ್ಲಿ ಇರುಸು ಮುರುಸು ಉಂಟುಮಾಡುತ್ತಿದೆ.

 Youth arrange parties in KRS Backwater
Youth arrange parties in KRS Backwater

By

Published : Jun 1, 2021, 4:51 PM IST

ಮಂಡ್ಯ: ಕೆಆರ್‌ಎಸ್‌ ಹಿನ್ನೀರಿನಲ್ಲಿ ನಿರ್ಬಂಧ ಇದ್ದರೂ ಯುವಕ- ಯುವತಿಯರು ಪಾರ್ಟಿ ನಡೆಸಲು ಮುಂದಾಗಿರುವುದನ್ನ ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಹಿನ್ನೀರಿನಲ್ಲಿ ಮೈಸೂರು ಮೂಲದ ಯುವಕ - ಯುವತಿಯರು ಮೋಜು-ಮಸ್ತಿ ಮಾಡಲು ಬರುತ್ತಿದ್ದಾರೆ.

ಇದನ್ನು ಕಂಡ ಸ್ಥಳೀಯರು ಪ್ರಶ್ನೆ ಮಾಡಿದರೆ, ಸ್ಥಳೀಯರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಘಟನೆ ಹಿನ್ನೆಲೆ ಸ್ಥಳೀಯರು ಕೆಆರ್‌ಎಸ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಕೆಆರ್‌ಎಸ್‌ ಪೊಲೀಸರು ಸ್ಥಳಕ್ಕೆ ಬಂದು ಪಾರ್ಟಿ ಮಾಡಲು ಬಂದವರಿಗೆ ಬೈದು ಬುದ್ಧಿ ಹೇಳುವ ಬದಲು ಸ್ಥಳೀಯರು ಮತ್ತು ಯುವಕರ ನಡುವೆ ರಾಜಿ ಮಾಡಿಸಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.

For All Latest Updates

ABOUT THE AUTHOR

...view details