ನಾಗ್ಪುರ(ಮಹಾರಾಷ್ಟ್ರ): ಹೆರಿಗೆ ಮಾಡಿಸಲು ವೈದ್ಯರು ನಿರಾಸಕ್ತಿ ತೋರಿದ ಪರಿಣಾಮ ಗರ್ಭಿಣಿ ತಾನೇ ಎಲ್ಲಾ ರೀತಿಯ ಪ್ರಸವ ವಿಧಾನಗಳನ್ನು ಅನುಸರಿಸಿ ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ನಾಗ್ಪುರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಹೆರಿಗೆ ಮಾಡಲು ವೈದ್ಯರ ನಿರಾಸಕ್ತಿ.. ತನ್ನ ಹೆರಿಗೆ ತಾನೇ ಮಾಡಿಕೊಂಡ ಗಟ್ಟಿಗಿತ್ತಿ.. ಮಗು-ಬಾಣಂತಿ ಇಬ್ಬರೂ ಸೇಫ್! - ಗರ್ಭಿಣಿ
ಹುಡ್ಕೇಶ್ವರ ನಿವಾಸಿಯಾಗಿರುವ ಸುಖೇಷ್ಣಿ ಶ್ರೀಕಾಂತ್ ಚತಾರೆ (23) ಗರ್ಭ ಧರಿಸಿದ ದಿನದಿಂದಲೂ ಎಲ್ಲ ರೀತಿಯ ಚಿಕಿತ್ಸೆಗಳನ್ನೂ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲೇ ಪಡೆಯುತ್ತಿದ್ದರು.
ಹೆರಿಗೆ
ಹುಡ್ಕೇಶ್ವರ ನಿವಾಸಿ ಸುಖೇಷ್ಣಿ ಶ್ರೀಕಾಂತ್ ಚತಾರೆ (23) ಎಂಬುವರು ಗರ್ಭ ಧರಿಸಿದ ದಿನದಿಂದಲೂ ಎಲ್ಲಾ ರೀತಿಯ ಚಿಕಿತ್ಸೆಗಳನ್ನೂ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲೇ ಪಡೆಯುತ್ತಿದ್ದರು.ಹೆರಿಗೆ ಮಾಡಿಸಲು ನಿರಾಕರಿಸಿದ ಸರ್ಕಾರಿ ಆಸ್ಪತ್ರೆಯ ನೀತಿಯ ಕುರಿತಾಗಿ ತನಿಖೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಸಂಬಂಧ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಸದ್ಯ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ.