ಬ್ರಿಸ್ಬೇನ್:ಬಾಲ್ ಟ್ಯಾಂಪರಿಂಗ್ ಮಾಡಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಸ್ಟಿವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಮತ್ತೆ ಹಳದಿ ಜರ್ಸಿ ತೊಟ್ಟು ಮಿಂಚಿದ್ದಾರೆ.
ಇಂದು ನಡೆದ ನ್ಯೂಜಿಲ್ಯಾಂಡ್ ಇಲೆವೆನ್ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ವಾರ್ನರ್ 39 ರನ್ಗಳಿಸಿದರೆ, ಸ್ಟಿವ್ ಸ್ಮಿತ್ 22 ರನ್ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರವಿದ್ದ ಈ ಇಬ್ಬರು ಆಟಗಾರರು ಇಂದು ತಮ್ಮ ದೇಶದ ಜರ್ಸಿ ತೊಟ್ಟು ಆಡಿ ಗಮನ ಸೆಳೆದರು. ನ್ಯೂಜಿಲ್ಯಾಂಡ್ ಇಲೆವೆನ್ ನೀಡಿದ 219 ರನ್ಗಳ ಗುರಿಯನ್ನು 9 ವಿಕೆಟ್ ಕಳೆದುಕೊಂಡು ಬೆನ್ನತ್ತಿದ ಆಸೀಸ್ ಇನ್ನು 10 ಎಸೆತಗಳು ಉಳಿದಿರುವಂತೆ 1 ವಿಕೆಟ್ ರೋಚಕ ಜಯ ಸಾಧಿಸಿತು.