ನವದೆಹಲಿ:ಕುಡಿಯುವ ನೀರಿನಲ್ಲಿ ತಮ್ಮ ಕಾರನ್ನು ತೊಳೆದ ಆರೋಪದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ದಂಡ ತೆರಬೇಕಾಗಿದೆ.
ಕೊಹ್ಲಿ ಮನೆಯ ಸಹಾಯಕ ಕಾರನ್ನು ತೊಳೆಯಲು ಕುಡಿಯುವ ನೀರು ಬಳಸಿದ್ದು ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ಗುರುಗ್ರಾಮ ಪುರಸಭೆ ಭಾರತ ಕ್ರಿಕೆಟ್ ತಂಡದ ಕಪ್ತಾನನಿಗೆ 500 ರೂಪಾಯಿ ದಂಡ ವಿಧಿಸಿದೆ.
ಟ್ವಿಟರ್ನಲ್ಲಿ ಧೋನಿ ಬೆಂಬಲಿಸಿದ ದೇಶದ ಜನತೆ...! ಮಾಹಿಗೆ ಬಿಸಿಸಿಐ ಫುಲ್ ಸಫೋರ್ಟ್
ಏನಿದು ಘಟನೆ?
ಕೊಹ್ಲಿ ತಮ್ಮ ಗುರುಗ್ರಾಮದಲ್ಲಿ ನಿವಾಸದಲ್ಲಿ ಐದಾರು ಅಧಿಕ ಕಾರುಗಳನ್ನು ಹೊಂದಿದ್ದಾರೆ. ಈ ಕಾರುಗಳನ್ನು ತೊಳೆಯಲು ಕೊಹ್ಲಿ ನಿತ್ಯ ಸಾವಿರಾರು ಲೀಟರ್ ನೀರು ಪೋಲು ಮಾಡುತ್ತಿದ್ದಾರೆ ಎಂದು ಕೊಹ್ಲಿ ನೆರೆಮನೆಯಾತ ದೂರು ನೀಡಿದ್ದರು.
ಉತ್ತರ ಭಾರತದಲ್ಲಿ ತೀವ್ರ ಬಿಸಿಲಿನ ಪರಿಣಾಮ ನೀರಿನ ಅಭಾವ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಕೊಹ್ಲಿ ನೀರನ್ನು ಪೋಲು ಮಾಡುತ್ತಿರುವುದು ಪುರಸಭೆಯ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ದಂಡ ವಿಧಿಸಿ ಆದೇಶಿಸಿದೆ.