ಟೆಹ್ರಾನ್(ಇರಾನ್): ಇರಾನ್ನಲ್ಲಿ ಉಂಟಾಗಿರುವ ಭೀಕರ ಪ್ರವಾಹಕ್ಕೆ ಈವರೆಗೆ ಸರಿಸುಮಾರು 70 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಭಾನುವಾರ ದೇಶದ ಹಲವೆಡೆ ಮತ್ತೆ ಎಚ್ಚರಿಕೆ ನೀಡಲಾಗಿದೆ. ಪ್ರವಾಹ ಹೆಚ್ಚಾಗುವ ಸಾಧ್ಯತೆಯಲ್ಲಿ ಇರಾನ್ ಹಾಗೂ ಇರಾಕ್ ಗಡಿ ಪ್ರದೇಶದಲ್ಲಿರುವ ಹಲವು ಹಳ್ಳಿಗಳಿಂದ ಜನರನ್ನು ಸ್ಥಳಾಂತರ ಮಾಡಲಾಗಿದೆ.
ಇರಾನ್ನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಮಾರ್ಚ್ 19ರಿಂದ ನಿರಂತರವಾಗಿ ಇರಾನ್ನಲ್ಲಿ ಮಳೆ ಸುರಿಯುತ್ತಿದ್ದು ಈವರೆಗೆ 1,900 ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿವೆ. ಆಂತರಿಕ ಸಚಿವೆ ಅಬ್ಡೋಲ್ರೆಜಾ ರಹ್ಮಾನಿ ಫಜ್ಲಿ ಪ್ರಕಾರ ಇನ್ನೂ ನಾಲ್ಕು ಲಕ್ಷ ಮಂದಿ ಪ್ರವಾಹದ ಹೊಡೆತ ಅನುಭವಿಸಲಿದ್ದಾರೆ ಎಂದಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಇರಾನ್ ದೇಶಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶ ಯಾವುದೇ ಸಹಾಯಕ್ಕೆ ಸಿದ್ಧ ಎಂದು ಖಾನ್ ಟ್ವೀಟ್ ಮಾಡಿದ್ದಾರೆ.