ಮುಂಬೈ:ಕಳೆದ ರಾತ್ರಿ ಮುಂಬೈ ಮಹಾನಗರಿಯ ಕಾರ್ಟರ್ ರೋಡ್ನಲ್ಲಿ ಮೂವರು ಯುವಕರು ಕಾರಿನ ಕಿಡಕಿ ಮೇಲೆ ಕುಳಿತು ಎಂಜಾಯ್ ಮಾಡಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದರು.
ಈ ಮಹಾನಗರಿಯಲ್ಲಿ ಪುಂಡರ ಹುಚ್ಚಾಟ... ಇವರು ಮಾಡಿದ ಆ ತುಂಟಾಟ ಏನು? - ತೊಂದರೆ
ಮಹಾನಗರಿ ಮುಂಬೈನ ರಸ್ತೆಯೊಂದರಲ್ಲಿ ಚಲಿಸುವ ಕಾರಿನಲ್ಲಿ ಕಿಟಕಿಗಳ ಮೇಲೆ ಕುಳಿತ ಮೂವರು ಯುವಕರು ಅಪಾಯಕಾರಿ ಸ್ಟಂಟ್ ಮಾಡಿದ್ದ ಮೂವರನ್ನು ಖಾಕಿಪಡೆ ಬಂಧಿಸಿ ಜೈಲಿಗಟ್ಟಿದ್ದಾರೆ.
ಪುಂಡರ ಹುಚ್ಚಾಟ
ಚಲಿಸುವ ಕಾರಿನಲ್ಲಿ ಕಿಟಕಿಗಳ ಮೇಲೆ ಕುಳಿತ ಮೂವರು ಯುವಕರು ಅಪಾಯಕಾರಿ ಸ್ಟಂಟ್ ಮಾಡಿದ್ದರು. ಇದು ಸಾರ್ವಜನಿಕರು ಹಾಗೂ ದಾರಿ ಹೋಕರಿಗೆ ಕಿರಿಕಿರಿಯನ್ನುಂಟು ಮಾಡಿತ್ತು.
ಅಷ್ಟೇ ಏಕೆ ಇದೊಂದು ಅಪಾಯಕಾರಿ ಸ್ಟಂಟ್ ಆಗಿದ್ದರಿಂದ ಸುದ್ದಿ ತಿಳಿದ ಪೊಲೀಸರು, ಸ್ಟಂಟ್ ಮಾಡುತ್ತಿದ್ದ ಮೂವರು ಯುವಕರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಸಂಬಂಧ ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.