ನವದೆಹಲಿ: ಜಾಗತಿಕ ತಾಪಮಾನ ಏರಿಕೆಯಿಂದಾಗಿ ನಿತ್ಯವೂ ಸೂರ್ಯನ ಕಿರಣಗಳ ಪ್ರಖರತೆ ಜಾಸ್ತಿ ಆಗ್ತಾನೇ ಇದೆ. ಇದರಿಂದಾಗಿ ಮಾನವ ಅಷ್ಟೇ ಏಕೆ ಪ್ರಾಣಿ ಪಕ್ಷಿಗಳು ಬದುಕುವುದು ಕಷ್ಟವಾಗಿದೆ. ಎಷ್ಟೋ ಹಳ್ಳಿಗಳು ನೀರಿಲ್ಲದೇ ಪರದಾಡ್ತಿವೆ.
ಒಂದೆಡೆ ನೀರಿನ ಹಾಹಾಕಾರ...ಮತ್ತೊಂದೆಡೆ ನೆತ್ತಿ ಮೇಲೆ ಸುಡುವ ಸೂರ್ಯನ ಪ್ರತಾಪ.. ಹೀಗಾಗಿ ಜನ - ಜಾನುವಾರುಗಳು ಕಂಗಾಲಾಗಿವೆ. ಈ ಮಧ್ಯೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಮುಟ್ಟಿದೆ. ಇದು ಶುಕ್ರವಾರದ ವೇಳೆಗ 47 ಡಿಗ್ರಿ ಸೆಲ್ಸಿಯಸ್ಗೂ ತಲುಪಿದರೂ ಅಚ್ಚರಿಯಿಲ್ಲ.
ಬುಧವಾರ ದೆಹಲಿಯಲ್ಲಿ 43.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಭಾರತೀಯ ಹವಾಮಾನ ಇಲಾಖೆ ಪ್ರಕಾರ ದೆಹಲಿಯಲ್ಲಿ ಮುಂದಿನ ಐದು ದಿನಗಳಲ್ಲಿ ಸುಮಾರು 45- 46 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಮುನ್ಸೂಚನೆ ನೀಡಿದೆ.