ಕರ್ನಾಟಕ

karnataka

ETV Bharat / briefs

ಹಕ್ಕು ಚಲಾಯಿಸಲು 8,553 ಮೈಲಿ ಕ್ರಮಿಸಿದ ಶಿವಸೇನೆಯ ಕಟ್ಟಾಳು..!

ಬ್ರೆಜಿಲ್​ನಲ್ಲಿ ಸದ್ಯ ಉದ್ಯೋಗದಲ್ಲಿರುವ ಮುಂಬೈ ಮೂಲದ ಧೀರಜ್​​ ಮೋರೆ ಶಿವಸೇನಾ ಪಕ್ಷದ ಕಟ್ಟಾ ಅಭಿಮಾನಿ. ತಮ್ಮ ಕಾರಿನಲ್ಲೂ ಶಿವಸೇನೆಯ ಸ್ಟಿಕರ್​ ಅಂಟಿಸಿಕೊಂಡಿದ್ದಾರೆ.

ಧೀರಜ್​​ ಮೋರೆ

By

Published : May 1, 2019, 1:17 PM IST

Updated : May 1, 2019, 1:22 PM IST

ಮುಂಬೈ:ಮತದಾನ ಎನ್ನುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಅತ್ಯಂತ ಪರಿಣಾಮಕಾರಿ ಆಯುಧವಿದ್ದಂತೆ. ಈ ಹಕ್ಕನ್ನು ಚಲಾಯಿಸಲು ಮುಂಬೈನ ವ್ಯಕ್ತಿ ಬರೋಬ್ಬರಿ 8,553 ಮೈಲು ಕ್ರಮಿಸಿ ಭಾರತಕ್ಕೆ ಬಂದಿದ್ದಾರೆ.

ಬ್ರೆಜಿಲ್​ನಲ್ಲಿ ಸದ್ಯ ಉದ್ಯೋಗದಲ್ಲಿರುವ ಮುಂಬೈ ಮೂಲದ ಧೀರಜ್​​ ಮೋರೆ ಶಿವಸೇನಾ ಪಕ್ಷದ ಕಟ್ಟಾ ಅಭಿಮಾನಿ. ತಮ್ಮ ಕಾರಿನಲ್ಲಿ ಸಹ ಶಿವಸೇನೆಯ ಸ್ಟಿಕರ್​ ಅಂಟಿಸಿಕೊಂಡಿದ್ದಾರೆ.

1998ರಲ್ಲಿ ಮುಂಬೈ ತೊರೆದ ಮೋರೆ ಹಾಂಕಾಂಗ್​ಗೆ ತೆರಳಿದ್ದರು. ಪ್ರಸ್ತುತ ಬ್ರೆಜಿಲ್​​ನಲ್ಲಿ ಟೆಕ್ಸ್​​ಟೈಲ್​ ಇಂಜಿನಿಯರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎಂಟು ವರ್ಷದಿಂದ ಯಾವುದೇ ಮತದಾನವನ್ನು ತಪ್ಪಿಸದ ಮೋರೆ, ಭಾರತಕ್ಕೆ ಬಂದು ವೋಟ್ ಮಾಡುತ್ತಿದ್ದಾರೆ.

ಮೋರೆ ಇದರ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 1993ರಲ್ಲಿ ಮುಂಬೈನ ಸೆಂಚುರಿ ಬಜಾರ್​​ನಲ್ಲಿ ಸ್ಫೋಟ ಸಂಭವಿಸಿದಾಗ ಮೋರೆ ಸಾಕಷ್ಟು ಧನಸಹಾಯ ಮಾಡಿದ್ದರು.

ಧೀರಜ್ ಮೋರೆ ಕಾರ್ಯ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆಗೆ ತಿಳಿದು, ಮೋರೆಯನ್ನು ಕರೆಸಿ ಶ್ಲಾಘಿಸಿದ್ದರು. ಈ ಘಟನೆಯ ನಂತರ ಶಿವಸೇನೆ ಪಕ್ಷದ ಮೇಲೆ ಮೋರೆಗೆ ಸಾಕಷ್ಟ ಅಭಿಮಾನ ಮೂಡಿತ್ತು.

Last Updated : May 1, 2019, 1:22 PM IST

ABOUT THE AUTHOR

...view details