ಬಂಡೀಪುರ ಕಾಡ್ಗಿಚ್ಚಿನಲ್ಲಿ ಬೆಂಕಿ ಆರಿಸಿದ್ದಕ್ಕಿಂತ ಸೆಲ್ಫಿ ತಗೆದುಕೊಂಡ ಸ್ವಯಂ ಸೇವಕರೇ ಹೆಚ್ಚು..!
ಅರಣ್ಯದ ಬೆಂಕಿ ನಂದಿಸುವ ಹೆಸರಲ್ಲಿ ಕಾಡನ್ನು ಪ್ರವೇಶ ಮಾಡಿದ ಸ್ವಯಂ ಸೇವಕರು ಬೆಂಕಿ ನಂದಿಸಲು ಸಹಾಯ ಮಾಡುವುದಾಗಿ ತಿಳಿಸಿ ಅಗ್ನಿ ಆರಿಸಲು ಗಮನ ನೀಡದೆ ಸೆಲ್ಫಿ ತಗೆದುಕೊಳ್ಳಲು ವಿಶೇಷ ಆಸಕ್ತಿ ವಹಿಸಿರುತ್ತಾರೆ . ಇವರನ್ನ ನಿಯಂತ್ರಿಸುವುದೇ ದೊಡ್ಡ ಸವಾಲಿನ ಕೆಲಸವಾಗಿರುತ್ತದೆ ಎಂದು ಅರಣ್ಯ ಪಡೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು:ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕಳೆದ ಫೆಬ್ರವರಿ ತಿಂಗಳು ಹಬ್ಬಿದ ಕಾಡ್ಗಿಚ್ಚಲ್ಲಿ ಬೆಂಕಿ ನಂದಿಸಲು ಬಂದಿದ್ದ ಸ್ವಯಂ ಸೇವಕರಲ್ಲಿ ಹೆಚ್ಚಿನ ಜನ ಕಾಡಿನ ಬೆಂಕಿ ನಂದಿಸುವ ಬದಲು ಮೊಬೈಲ್ ನಲ್ಲಿ ಸೆಲ್ಫಿ ತಗೆದುಕೊಂಡವರೇ ಹೆಚ್ಚು ಜನ ಎಂದು ಅರಣ್ಯ ಇಲಾಖೆ ಸರಕಾರಕ್ಕೆ ವರದಿ ಸಲ್ಲಿಸಿದೆ.
ಅರಣ್ಯದ ಬೆಂಕಿ ನಂದಿಸುವ ಹೆಸರಲ್ಲಿ ಕಾಡನ್ನು ಪ್ರವೇಶ ಮಾಡಿದ ಸ್ವಯಂ ಸೇವಕರು ಬೆಂಕಿ ನಂದಿಸಲು ಸಹಾಯ ಮಾಡುವುದಾಗಿ ತಿಳಿಸಿ ಅಗ್ನಿ ಆರಿಸಲು ಗಮನ ನೀಡದೆ ಸೆಲ್ಫಿ ತಗೆದುಕೊಳ್ಳಲು ವಿಶೇಷ ಆಸಕ್ತಿ ವಹಿಸಿರುತ್ತಾರೆ. ಇವರನ್ನ ನಿಯಂತ್ರಿಸುವುದೇ ದೊಡ್ಡ ಸವಾಲಿನ ಕೆಲಸವಾಗಿರುತ್ತದೆ ಎಂದು ಅರಣ್ಯ ಪಡೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.