ಕರ್ನಾಟಕ

karnataka

ETV Bharat / briefs

ಸ್ಕರ್ಟ್​ ಧರಿಸಿ ಆಫೀಸ್​ಗೆ ಬಂದ್ರೆ ಎಕ್ಸ್​​ಟ್ರಾ ಪಗಾರ! ತುಂಟ ನಿಯಮಕ್ಕೆ ಮಹಿಳೆಯರ ವಿರೋಧ - ವೇತನ

ಮಹಿಳಾ ಉದ್ಯೋಗಿಗಳು ಸ್ಕರ್ಟ್​ ಧರಿಸಿ ಕಚೇರಿಗೆ ಬಂದಲ್ಲಿ ನೂರು ರೌಬೆಲ್​(1.19 ಪೌಂಡ್) ಹೆಚ್ಚಿನ ಸಂಬಳ ನೀಡುವುದಾಗಿ ಕೆಲ ದಿನಗಳ ಹಿಂದೆ ರಷ್ಯಾದ ಕಂಪನಿ ಪ್ರಕಟಿಸಿತ್ತು.

ಸ್ಕರ್ಟ್

By

Published : Jun 2, 2019, 3:11 PM IST

ಮಾಸ್ಕೋ(ರಷ್ಯಾ):ಮಹಿಳಾ ಉದ್ಯೋಗಿಗಳು ಸ್ಕರ್ಟ್​ ಧರಿಸಿ ಕೆಲಸಕ್ಕೆ ಹಾಜರಾದರೆ ಹೆಚ್ಚಿನ ವೇತನ ನೀಡುವುದಾಗಿ ಇಲ್ಲಿನ ಕಂಪೆನಿಯೊಂದು ಘೋಷಿಸಿದೆ.

ಮಹಿಳಾ ಉದ್ಯೋಗಿಗಳು ಸ್ಕರ್ಟ್​ ಧರಿಸಿ ಬಂದಲ್ಲಿ ನೂರು ರೌಬೆಲ್​(1.19 ಪೌಂಡ್) ಹೆಚ್ಚಿನ ಸಂಬಳ ನೀಡುವುದಾಗಿ ಕೆಲ ದಿನಗಳ ಹಿಂದೆ ಹೇಳಿತ್ತು. ತಂಡದ ನಡುವಿನ ಬಾಂಧವ್ಯ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇದೇ ವೇಳೆ ಕಂಪೆನಿ ತಿಳಿಸಿತ್ತು.

ಕಂಪೆನಿಯ ಈ ತೀರ್ಮಾನವನ್ನು ಮಹಿಳಾ ಪರ ಹೋರಾಟಗಾರರು ತೀವ್ರವಾಗಿ ವಿರೋಧಿಸಿದ್ದಾರೆ. ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಕಮೆಂಟು ಮಾಡಿದ್ದಾರೆ.

ABOUT THE AUTHOR

...view details