ಮುಂಬೈ:ಲೋಕಸಭಾ ಚುನಾವಣೆಯ ಏಳೂ ಹಂತದ ಮತದಾನ ಮುಕ್ತಾಯವಾಗಿದ್ದು ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಈ ಸಮೀಕ್ಷೆಗಳು ಷೇರು ಮಾರುಕಟ್ಟೆಗೆ ಜೀವ ತುಂಬಿದೆ.
ಭಾನುವಾರ ಅಂತ್ಯದಲ್ಲಿ ಧನಾತ್ಮಕವಾಗಿ ವಹಿವಾಟು ಮುಗಿಸಿದ್ದ ಷೇರು ಮಾರುಕಟ್ಟೆ ಸೋಮವಾರ ಉತ್ತಮ ಆರಂಭ ಕಂಡಿದೆ. ಇದು ಸಹಜವಾಗಿಯೇ ಹೂಡಿಕೆದಾರರಿಗೆ ಸಂತಸ ತಂದಿದೆ.
ಇಂದಿನ ಆರಂಭದಲ್ಲಿ ನಿಫ್ಟಿ ಶೇ.2.22ರಷ್ಟು ಹೆಚ್ಚಳವಾಗಿದ್ದರೆ ಬಿಎಸ್ಇ ಸೆನ್ಸೆಕ್ಸ್ ಶೇ.2.31ರಷ್ಟು ಏರಿಕೆಯಾಗಿದೆ.
ಹೆಚ್ಚಿನ ಓದಿಗಾಗಿ:
ಈ ಬಾರಿನೂ ಮೋದಿನ ಅಲುಗಾಡಿಸೋದಕ್ಕೆ ಆಗಲ್ವಂತೆ... ಎಲ್ಲ ಸಮೀಕ್ಷೆಗಳು ಹೇಳ್ತಿವೆ ಈ ಭವಿಷ್ಯ!
ಆರು ವಾರಗಳ ಸುದೀರ್ಘ ಲೋಕಸಭಾ ಚುನಾವಣೆ ಭಾನುವಾರ ಅಂತ್ಯವಾಗಿದೆ. ಇದೇ ವೇಳೆ ರೂಪಾಯಿ ಸಹ ಡಾಲರ್ ಎದುರು ಕೊಂಚ ಚೇತರಿಕೆ ಕಂಡಿದೆ. ಶೇ.2.3ರಷ್ಟು ಏರಿಕೆ ಕಂಡ ರೂಪಾಯಿ 69.10ರಲ್ಲಿ ವಹಿವಾಟು ಮುಗಿಸಿತ್ತು.
ಮೇ 23ರಂದು ಲೋಕಸಭಾ ಚುನಾವಣೆಯ ಮಹಾಫಲಿತಾಂಶ ಹೊರ ಬೀಳಲಿದ್ದು ಷೇರು ಮಾರುಕಟ್ಟೆ ಇನ್ನೆರಡು ದಿನ ಉತ್ತಮ ವಹಿವಾಟು ನಡೆಸುವ ಸಾಧ್ಯತೆ ನಿಚ್ಚಳವಾಗಿದೆ.