ಬೆಂಗಳೂರು: ಬಿಸಿಲ ಧಗೆಗೆ ಬೆಂದು ಹೋಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಆಸುಪಾಸಿನ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.
ದೇವನಹಳ್ಳಿ: ಭೂಮಿಗೆ ತಂಪೆರೆದ ಮಳೆರಾಯ - ಮಳೆ
ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ ಶುಕ್ರವಾರ ವರುಣ ಕೃಪೆ ತೋರಿದ್ದಾನೆ. ಬಿಸಿಲಿಗೆ ಬಾಡಿದ ಜನರಿಗೆ ಶುಕ್ರವಾರ ಸಂಜೆ ಸುರಿದ ಮಳೆ ತಂಪೆರೆದಿದೆ.
ದೇವನಹಳ್ಳಿ ಸುತ್ತ ತಂಪೆರೆದ ಮಳೆ ರಾಯ
ಶುಕ್ರವಾರ ಸಂಜೆ ಹೊತ್ತಿಗೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಹಳ್ಳ ಕೊಳ್ಳಗಳೆಲ್ಲ ತುಂಬಿವೆ. ರಸ್ತೆಗಳಲ್ಲಿ ಮಳೆ ನೀರು ಹರಿದಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಕೆಲವು ಕಡೆ ಮರಗಳು ಧರೆಗುರಳಿವೆ. ಮಳೆ ಇಲ್ಲದೇ ಬೇಸತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.