ಲೂಧಿಯಾನ್:ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಂಜಾಬ್ನ ಲೂಧಿಯಾನಾದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಟ್ರ್ಯಾಕ್ಟರ್ ಹತ್ತಿದ ರಾಗಾ, ಮತದಾರರ ಗಮನ ಸೆಳೆಯುವ ಕಸರತ್ತು ನಡೆಸಿದರು.
ಟ್ರ್ಯಾಕ್ಟರ್ ಓಡಿಸಿ ಮತ ಯಾಚಿಸಿದ ರಾಹುಲ್ ಗಾಂಧಿ.. ವೀಡಿಯೊ ವೈರಲ್
ಲೂಧಿಯಾನಾದಲ್ಲಿ ಕೈ ಅಭ್ಯರ್ಥಿ ಪರ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಟ್ರ್ಯಾಕ್ಟರ್ ಏರಿ ಮತದಾರರ ಗಮನ ಸೆಳೆಯುವ ಪ್ರಯತ್ನ ನಡೆಸಿದರು.
ರಾಹುಲ್ ಗಾಂಧಿ
ಪಂಜಾಬ್ನ ಲೂಧಿಯಾನಾದಲ್ಲಿ ತಮ್ಮ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿದ ರಾಗಾ ಟ್ರ್ಯಾಕ್ಟರ್ ಓಡಿಸಿ ಎಲ್ಲರ ಮನಗೆದ್ದರು. ಅಲ್ಲದೇ ಜನರತ್ತ ಕೈ ಬೀಸಿ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಇವರಿಗೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್,ಲೂಧಿಯಾನ್ ಎಂಪಿ ರವೀತ್ ಬಿಟ್ಟು ಹಾಗೂ ಕಾಂಗ್ರೆಸ್ ಮುಖಂಡೆ ಆಶಾ ಕುಮಾರಿ ಸಾತ್ ನೀಡಿದರು.
ಈ ಹಿಂದೆ ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ಟ್ರ್ಯಾಕ್ಟರ್ ಓಡಿಸುವ ಮೂಲಕ ಮತಯಾಚನೆ ಮಾಡಿದರು.
Last Updated : May 15, 2019, 10:19 PM IST