ಕರ್ನಾಟಕ

karnataka

ETV Bharat / briefs

ಪ್ರಚಂಡ ಗೆಲುವಿನ ಬಳಿಕ ಇವತ್ತು ವಾರಣಾಸಿಗೆ ಮೋದಿ.. 'ನಮೋ' ವಿಶ್ವನಾಥ, ನಮಾಮಿ ಗಂಗೆ!

ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲು ಮಾಡಿರುವ ನರೇಂದ್ರ ಮೋದಿ ಇಂದು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿ, ಕಾಶಿ ವಿಶ್ವನಾಥನ ಆಶೀರ್ವಾದ ಪಡೆದುಕೊಳ್ಳಲಿದ್ದಾರೆ.

ನರೇಂದ್ರ ಮೋದಿ

By

Published : May 27, 2019, 8:08 AM IST

ವಾರಣಾಸಿ :ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲು ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ತವರು ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದು, ಅಲ್ಲಿನ ಮತದಾರರಿಗೆ ಧನ್ಯವಾದ ಅರ್ಪಿಸದ್ದಾರೆ. ಇದಷ್ಟೇ ಅಲ್ಲ, ಮೋದಿ ಸಂಜೆ ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ.

ಎರಡು ದಿನಗಳ ಕಾಲ ತವರು ರಾಜ್ಯ ಗುಜರಾತ್​ ಪ್ರವಾಸದಲ್ಲಿದ್ದರು. ಮೋದಿ ಮೇ 30ರಂದು ಸಂಜೆ 7ಗಂಟೆಗೆ 2ನೇ ಅವಧಿಗೆ ಪ್ರಧಾನಿಯಾಗಿ ಪದಗ್ರಹಣ ಮಾಡಲಿದ್ದಾರೆ. ಅದಕ್ಕೂ ಮುಂಚಿತವಾಗಿ ಇಂದು ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಇವತ್ತು ರೋಡ್​ ಶೋ ನಡೆಸಲಿರುವ ಮೋದಿ, ಕಾಶಿ ವಿಶ್ವನಾಥನ ದೇವಾಲಯಕ್ಕೂ ಭೇಟಿ ನೀಡಲಿದ್ದಾರೆ.ಮೋದಿ ಸ್ವಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಕಾರಣ ಬ್ಯಾನರ್​ಗಳು ಈಗಾಗಲೇ ರಾರಾಜಿಸುತ್ತಿವೆ. ಈ ಹಿಂದೆ ನಾಮಪತ್ರ ಸಲ್ಲಿಕೆ ಮಾಡಲು ತೆರಳಿದ್ದ ಮೋದಿ, ಬೃಹತ್ ರೋಡ್​ ಶೋ ನಡೆಸಿ, ಸಂಜೆ ಗಂಗಾ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 17ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 542 ಕ್ಷೇತ್ರಗಳ ಪೈಕಿ 303 ಸ್ಥಾನ ಗೆಲ್ಲುವ ಮೂಲಕ ಎರಡನೇ ಅವಧಿಗೆ ಸರ್ಕಾರ ರಚನೆ ಮಾಡಲಿದೆ.

ABOUT THE AUTHOR

...view details