ಕರ್ನಾಟಕ

karnataka

ETV Bharat / briefs

ನಕ್ಸಲ್​ ದಾಳಿಗೆ 16 ಯೋಧರು ಹುತಾತ್ಮ... ಹೇಡಿ ಕೃತ್ಯ ಖಂಡಿಸಿದ ಮೋದಿ, ರಾಜನಾಥ್​ ಸಿಂಗ್, ಶಾ - ರಾಜನಾಥ್​ ಸಿಂಗ್

nಕ್ಸಲ್ ದಾಳಿಯಲ್ಲಿ 16 ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದಾರೆ. ನಕ್ಸಲರ ಈ ಕೃತ್ಯವನ್ನು ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಅಮಿತ್ ಶಾ ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ.

ಮೋದಿ, ರಾಜನಾಥ್​ ಸಿಂಗ್, ಶಾ

By

Published : May 1, 2019, 3:21 PM IST

ಗಡ್ಚಿರೋಲಿ(ಮಹಾರಾಷ್ಟ್ರ):ಮಹಾರಾಷ್ಟ್ರ ಸ್ಥಾಪನಾ ದಿನಾಚರಣೆಯ ಖುಷಿಯ ಸಂದರ್ಭದಲ್ಲೇ ನಕ್ಸಲರು ಪೊಲೀಸ್ ವಾಹನ ಸ್ಫೋಟಿಸಿ ಹೇಯ ಕೃತ್ಯ ಎಸಗಿದ್ದಾರೆ.

ಘಟನೆಯಲ್ಲಿ 16 ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದಾರೆ. ನಕ್ಸಲರ ಈ ಕೃತ್ಯವನ್ನು ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಅಮಿತ್ ಶಾ ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ.

ಈ ಹೇಡಿ ಕೃತ್ಯವನ್ನು ಖಂಡಿಸುತ್ತೇನೆ. ಎಲ್ಲ ಹುತಾತ್ಮರಾದ ಎಲ್ಲ ವೀರಯೋಧರಿಗೆ ಶಾಂತಿ ದೊರೆಯಲಿ. ಅವರ ಬಲಿದಾನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದುಷ್ಕೃತ್ಯ ಹಿಂದಿರುವವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಗೃಹಸಚಿವ ರಾಜನಾಥ್ ಸಿಂಗ್ ಸಹ ಟ್ವೀಟ್ ಮೂಲಕ ನಕ್ಸಲ್ ದಾಳಿಯನ್ನು ಖಂಡಿಸಿದ್ದಾರೆ. ಇದೊಂದು ಹೇಡಿ ಕೃತ್ಯ ಎಂದಿರುವ ರಾಜನಾಥ್ ಸಿಂಗ್, ವೀರಯೋಧ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಹ ಟ್ವೀಟ್ ಮಾಡುವ ಮೂಲಕ ನಕ್ಸಲರ ಕೃತ್ಯವನ್ನು ಖಂಡಿಸಿದ್ದಾರೆ. ಯೋಧರ ಬಲಿದಾನ ದೇಶದ ದೊಡ್ಡ ನಷ್ಟ ಎಂದಿದ್ದಾರೆ.

ABOUT THE AUTHOR

...view details